ದಾವಣಗೆರೆ: ಮಧ್ಯ ಕರ್ನಾಟಕದ ಪುಣ್ಯ ಕ್ಷೇತ್ರ ಉಚ್ಚೆಂಗೆಮ್ಮ ದೇವಿ ಇಲ್ಲಿನ ಜನಗಳ ಆರಾಧ್ಯ ದೇವತೆ. ಹರಪನಹಳ್ಳಿ ತಾಲೂಕಿನ ಈ ದೇವಿಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಹಿನ್ನೆಲೆ ಇಲ್ಲಿನ ಕಾಣಿಕೆ ಹುಂಡಿಗೆ ಲಕ್ಷಾಂತರ ಹಣ ಹರಿದು ಬರುತ್ತದೆ. ವಿಶೇಷ ಅಂದರೆ ಹುಂಡಿಯಲ್ಲಿ ಹಣವಷ್ಟೇ ಅಲ್ಲಾ ದೇವರಿಗೆ ಬರೆದ ಲೆಟರ್ ಕೂಡ ಸಿಕ್ಕಿವೆ.
ಹರಪನಹಳ್ಳಿ ತಾಲೂಕಿನ ಉಚ್ಚೆಂಗೆಮ್ಮ ಕೇಳಿದ ವರ ಕರುಣಿಸುವ ದೇವತೆ ಎಂದೇ ಪ್ರಸಿದ್ಧಿ. ಹೀಗಾಗಿ ಈ ದೇವತೆಗೆ ಲಕ್ಷಾಂತರ ಭಕ್ತರು ಇದ್ದಾರೆ. ಮುಖ್ಯವಾಗಿ ಅಮವಾಸ್ಯೆ, ಹುಣ್ಣೆಮೆ ದಿನದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಭಕ್ತರು ಹಲವು ಬೇಡಿಕೆ ಈಡೇರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ.
ಕಾಣಿಕೆ ಹುಂಡಿಯಲ್ಲಿ ಸಿಕ್ಕ ಪತ್ರ:
ದೇವಿಗೆ ಭಕ್ತನೊಬ್ಬ ಪತ್ರ ಬರೆದಿದ್ದು, ಪಿಯುಸಿ ಪರೀಕ್ಷೆ ಬರೆಯಲು ಹೋಗುತ್ತಿರುವುದರಿಂದ ಸನ್ನಿಧಾನಕ್ಕೆ ಬರಲಾಗುತ್ತಿಲ್ಲ. ಪರೀಕ್ಷೆಯಲ್ಲಿ ಆಯ್ಕೆಗೆ ತೆಗೆದುಕೊಂಡ ವಿಷಯವಾರು 541 ಅಂಕಗಳು ಬರುವಂತೆ ಅನುಗ್ರಹಿಸಿದರೆ ಮುಂದಿನ ಯುಗಾದಿ ಜಾತ್ರೆಗೆ ದರ್ಶನ ಪಡೆದು ಹರಕೆ ಸಲ್ಲಿಸುತ್ತೇನೆ ಎಂದು ಪತ್ರದ ಮೂಲಕ ಹರಕೆ ಕಟ್ಟಿಕೊಂಡಿದ್ದಾನೆ.