ದಾವಣಗೆರೆ:ಅದು ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ. ಆ ಜಾತ್ರೆ ಬಂದ್ರೆ ಸಾಕು ಭಕ್ತರು ಅದ್ಧೂರಿಯಾಗಿ ಆಚರಿಸುತ್ತಾರೆ. ಭಕ್ತರು ಸಾವಿರಾರು ಕೋಳಿ, ಕುರಿಗಳನ್ನು ಬಲಿ ಕೊಡುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.
ಸ್ಮಶಾನದ ಚೌಡಮ್ಮ ದೇವಿ ಜಾತ್ರೆ: ಇಷ್ಟಾರ್ಥ ಸಿದ್ಧಿಗಾಗಿ ಭಕ್ತರಿಂದ ವಿಶೇಷ ಪೂಜೆ - ದಾವಣಗೆರೆ ಇತ್ತೀಚಿನ ಸುದ್ದಿ
ದಾವಣಗೆರೆಯ ಗಾಂಧಿನಗರದ ಕೂಗಳತೆಯಲ್ಲಿರುವ ಸ್ಮಶಾನದ ಚೌಡಮ್ಮ ದೇವರ ಸನ್ನಿಧಿಯಲ್ಲಿ ಭಕ್ತರು ಕುರಿ-ಕೋಳಿಯನ್ನು ಬಲಿ ಕೊಡುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.
ದಾವಣಗೆರೆಯ ಗಾಂಧಿನಗರದ ಕೂಗಳತೆಯಲ್ಲಿರುವ ಸ್ಮಶಾನದ ಚೌಡಮ್ಮ ದೇವರ ಸನ್ನಿಧಿಯಲ್ಲಿ ಕುರಿ-ಕೋಳಿಯನ್ನು ಬಲಿ ಕೊಡುವ ಮೂಲಕ ಹರಕೆ ತೀರಿಸಲಾಗುತ್ತದೆ. ದೇವತೆ ಚೌಡಮ್ಮ ತಮ್ಮ ಇಷ್ಟಾರ್ಥಗಳು ಈಡೇರಿಸಲಿ ಎಂದು ಭಕ್ತಗಣ ಇಲ್ಲಿ ಕುರಿ-ಕೋಳಿಗಳನ್ನು ಹಲವು ವರ್ಷಗಳಿಂದ ಬಲಿ ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ ಧೀಡ್ ನಮಸ್ಕಾರ, ಉರುಳು ಸೇವೆ ಹಾಗೂ ಬೇವಿನುಡುಗೆ ತೊಟ್ಟು ಹರಕೆ ತೀರಿಸುತ್ತಾರೆ. ಹಲವು ಜಿಲ್ಲೆಗಳಿಂದ ದೇವಿಗೆ ಹರಕೆ ತೀರಿಸಲು ಭಕ್ತರು ಆಗಮಿಸುತ್ತಿದ್ದು, ಭಕ್ತಿಯಿಂದ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಇನ್ನು ಈ ದೇವಸ್ಥಾನದ ವಿಶೇಷವೆಂದರೆ ಮಹಿಳೆಯರೇ ಚೌಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಿದ್ದು, ಮಹಿಳೆಯರೇ ಪೂಜಾರಿಗಳಾಗಿದ್ದಾರೆ. ಹಲವು ದಶಕಗಳ ಇತಿಹಾಸವಿರುವ ಈ ಚೌಡೇಶ್ವರಿ ದೇವಿಗೆ ಪ್ರಾರಂಭದಲ್ಲಿ ಜೋಗತಿಯೊಬ್ಬರು ಪೂಜೆ ಸಲ್ಲಿಸುತ್ತಿದ್ದರು. ನಂತರ ಮಹಿಳೆಯರೇ ಪೂಜಾರಿಗಳಾಗಿ ಪೂಜಾ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದು, ಸಮಾಜದಲ್ಲಿ ಮಹಿಳೆಯರಿಗೂ ಕೂಡ ಸ್ಥಾನ ನೀಡಲಾಗಿದೆ. ಇನ್ನು ಕೊರೊನಾದ ಎರಡನೇ ಅಲೆ ಇದ್ದರೂ ಕೂಡ ಸಾವಿರಾರು ಜನರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ.