ದಾವಣಗೆರೆ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 45 ವಾರ್ಡ್ಗಳ ಕುಂದುಕೊರತೆ ನೀಗಿಸಲು ಹಾಗೂ ಸ್ಥಳದಿಂದಲೇ ಮಾಹಿತಿ ಪಡೆಯಲು ನೂತನ ವಾಟ್ಸ್‌ಆ್ಯಪ್ ನಂಬರನ್ನು ಮೇಯರ್ ವೀರೇಶ್ ಅನಾವರಣಗೊಳಿಸಿದರು.
ಜನರ ಕುಂದುಕೊರತೆ ನಿವಾರಣೆಗೆ ಕ್ರಮ; ಪಾಲಿಕೆಯಿಂದ ವಾಟ್ಸ್‌ಆ್ಯಪ್ ನಂಬರ್ ಅನಾವರಣ - ದಾವಣಗೆರೆ ಮಹಾನಗರ ಪಾಲಿಕೆ ಸುದ್ದಿ
ದಾವಣಗೆರೆ ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಬರುವ 45 ವಾರ್ಡ್ಗಳ ಸಮಸ್ಯೆಗಳನ್ನು ಜನರಿಂದ ಸುಲಭವಾಗಿ ತಿಳಿದುಕೊಳ್ಳಲು ವಾಟ್ಸ್‌ಆ್ಯಪ್ ನಂಬರ್ ಅನಾವರಣಗೊಳಿಸಿದೆ.
ದಾವಣಗೆರೆ ಮಹಾನಗರ ಪಾಲಿಕೆ
ದಾವಣಗೆರೆ ಮಹಾನಗರ ಪಾಲಿಕೆಯ ಯಾವುದೇ ವಾರ್ಡ್ನಲ್ಲಿ ಏನೇ ಸಮಸ್ಯೆಗಳಿದ್ದರೂ ವಿಳಾಸ ಸಹಿತ ಫೋಟೊ ಹಾಕಿ ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಿದರೆ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ಕೆ ಮುಂದಾಗುವುದಾಗಿ ಮೇಯರ್ ತಿಳಿಸಿದ್ದಾರೆ.
ಕಸ, ವಿದ್ಯುತ್ ದೀಪ, ಗಟರ್ ಸಮಸ್ಯೆ, ಕಸದ ವಾಹನ ಮನೆಯ ಹತ್ತಿರ ಬಾರದೇ ಇರುವ ಬಗೆಗಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಕೆಲವರನ್ನು ನೇಮಕ ಮಾಡಲಾಗಿದೆ. ಜನರ ಬಳಿ ಈ ಮೊಬೈಲ್ ಸಂಖ್ಯೆಯನ್ನು ಕೊಂಡೊಯ್ಯಲು ಈಗಾಗಲೇ ನೂತನ ಮೇಯರ್ ವೀರೇಶ್ ಸಿದ್ಧತೆ ನಡೆಸಿದ್ದಾರೆ.