ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಲಭ್ಯವಿರುವ ಆ್ಯಂಬುಲೆನ್ಸ್​ಗಳೆಷ್ಟು..? ಇಲ್ಲಿದೆ ಮಾಹಿತಿ - 108 Ambulance

ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 83 ಆ್ಯಂಬುಲೆನ್ಸ್​ಗಳು ಸೇವೆ ಒದಗಿಸುತ್ತಿವೆ. ಈ ಪೈಕಿ ಸರ್ಕಾರದ 108 ಜೀವರಕ್ಷಕ ಆ್ಯಂಬುಲೆನ್ಸ್​ಗಳು 19, ಸಾಮಾನ್ಯ ಸರ್ಕಾರಿ ಆ್ಯಂಬುಲೆನ್ಸ್ಗಳು 11 ಇವೆ. ಉಳಿದ 53 ಖಾಸಗಿ ಆ್ಯಂಬುಲೆನ್ಸ್​ಗಳಾಗಿವೆ..

Davangere Ambulance Davangere Ambulance
ದಾವಣಗೆರೆಯಲ್ಲಿ ಲಭ್ಯವಿರುವ ಆ್ಯಂಬುಲೆನ್ಸ್​ಗಳೆಷ್ಟು..?

By

Published : May 31, 2021, 2:04 PM IST

ದಾವಣಗೆರೆ :ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಆ್ಯಂಬುಲೆನ್ಸ್​ಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ. ಹಳ್ಳಿಗಾಡು ಪ್ರದೇಶಗಳಿಂದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಈ ಆ್ಯಂಬುಲೆನ್ಸ್​ಗಳು ಸದ್ದಿಲ್ಲದೆ ಉಚಿತ ಸೇವೆ ನೀಡುತ್ತಿವೆ.

ಎರಡು ವಿಧದ ಆ್ಯಂಬುಲೆನ್ಸ್:ಜಿಲ್ಲೆಯಲ್ಲಿ ಎರಡು ತರಹದ ಆ್ಯಂಬುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಬೇಸಿಕ್ ಲೈಫ್ ಸಪೋರ್ಟ್‌ ಆ್ಯಂಬುಲೆನ್ಸ್ (ಸಾಮಾನ್ಯ ರೋಗಿಗಳನ್ನು ಸಾಗಿಸುವಂತಹದ್ದು) ಮತ್ತೊಂದು ಅಡ್ವಾನ್ಸ್ ಲೈಫ್ ಸಪೋರ್ಟ್ (ವೆಂಟಿಲೇಟರ್ ಹಾಗೂ ಆಕ್ಸಿ‌ಜನ್ ಹೊಂದಿರುವಂತಹದ್ದು). ಈ ಎರಡೂ ವಿಧದ ಆ್ಯಂಬುಲೆನ್ಸ್ ಚಾಲಕರು ಹಗಲಿರುಳೆನ್ನದೆ ಕೆಲಸ ಮಾಡುತ್ತಾ, ಜನರ ಜೀವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ.

ದಾವಣಗೆರೆಯಲ್ಲಿ ಲಭ್ಯವಿರುವ ಆ್ಯಂಬುಲೆನ್ಸ್​ಗಳೆಷ್ಟು..?

ಜಿಲ್ಲೆಯಲ್ಲಿರುವ ಆ್ಯಂಬುಲೆನ್ಸ್​ಗಳೆಷ್ಟು?

ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 83 ಆ್ಯಂಬುಲೆನ್ಸ್​ಗಳು ಸೇವೆ ಒದಗಿಸುತ್ತಿವೆ. ಈ ಪೈಕಿ ಸರ್ಕಾರದ 108 ಜೀವರಕ್ಷಕ ಆ್ಯಂಬುಲೆನ್ಸ್​ಗಳು 19, ಸಾಮಾನ್ಯ ಸರ್ಕಾರಿ ಆ್ಯಂಬುಲೆನ್ಸ್ಗಳು 11 ಇವೆ. ಉಳಿದ 53 ಖಾಸಗಿ ಆ್ಯಂಬುಲೆನ್ಸ್​ಗಳಾಗಿವೆ.

ಸರ್ಕಾರಿ ಆ್ಯಂಬುಲೆನ್ಸ್​ಗಳ ಸಂಖ್ಯೆ ಕಡಿಮೆ ಇರುವುದರಿಂದ ಕೋವಿಡ್​ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಖಾಸಗಿ ಆ್ಯಂಬುಲೆನ್ಸ್​ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಬಳಸಿಕೊಳ್ಳುತ್ತಿದೆ.

ABOUT THE AUTHOR

...view details