ದಾವಣಗೆರೆ:ಮಳೆಗಾಲ ಆರಂಭದಲ್ಲಿ ಅನಾವೃಷ್ಠಿ ಅನುಭವಿಸಿದ ರೈತಾಪಿ ವರ್ಗವು ನಂತರ ಅತಿವೃಷ್ಠಿಯಿಂದ ಹಾನಿಗೊಳಗಾಗಿ ತಮ್ಮ ಜಮೀನುಗಳಲ್ಲಿ ಸರಿಯಾದ ಬೆಳೆಯನ್ನು ಕಾಣದೆ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು ಕ್ಷೀಣಿಸಿರುವ ದೃಶ್ಯ ಕಂಡುಬಂತು.
ಬೆಲೆ ಏರಿಕೆಯ ಮಧ್ಯೆ ಕ್ಷೀಣಿಸಿದ ಹಬ್ಬದ ಖರೀದಿಯ ಸಡಗರ.. - ದಾವಣಗೆರೆ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು
ಪೂಜಾ ವಸ್ತುಗಳನ್ನು ಖರೀದಿಸಲು ಪ್ರತೀ ವರ್ಷ ಬೆಳಗ್ಗೆಯಿಂದಲೇ ಗ್ರಾಹಕರು ಮುಗಿಬೀಳುತ್ತಿದ್ದರು. ಆದರೆ,ಈ ಬಾರಿಯ ಹಬ್ಬದ ಖರೀದಿಯ ಸೊಬಗು ವಿರಳವಾಗಿರುವುದು ಗೋಚರಿಸುತ್ತಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯು ಗಗನಕ್ಕೆ ಏರಿರುವುದು ಖರೀದಿದಾರರಿಗೆ ನುಂಗಲಾರದ ತುಪ್ಪವಾಗಿತ್ತು.
ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿ ವೃತ್ತ, ಮುಖ್ಯ ರಸ್ತೆ, ವುಡ್‌ಲ್ಯಾಂಡ್ ರಸ್ತೆ, ಪೋಸ್ಟ್ಆಫೀಸ್ ರಸ್ತೆಗಳಲ್ಲಿ ದಸರಾ ಹಬ್ಬದ ಆಯುಧ ಪೂಜೆಗೆ ವಿವಿಧ ಹೂ ಮತ್ತು ಹಣ್ಣುಗಳು, ಬಾಳೆ ಕಂಬ, ಕಬ್ಬಿನ ಗರಿ, ಕುಂಭಳಕಾಯಿ, ಮಾವಿನ ಎಲೆ, ಬಗೆ ಬಗೆಯ ಪೂಜಾ ವಸ್ತುಗಳನ್ನು ಖರೀದಿಸಲು ಪ್ರತೀ ವರ್ಷ ಬೆಳಗ್ಗೆಯಿಂದಲೇ ಗ್ರಾಹಕರು ಮುಗಿಬೀಳುತ್ತಿದ್ದರು. ಆದರೆ, ಈ ಬಾರಿಯ ಹಬ್ಬದ ಖರೀದಿಯ ಸೊಬಗು ವಿರಳವಾಗಿರುವುದು ಗೋಚರಿಸುತ್ತಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯು ಗಗನಕ್ಕೆ ಏರಿರುವುದು ಖರೀದಿದಾರರಿಗೆ ನುಂಗಲಾರದ ತುಪ್ಪವಾಗಿತ್ತು.
ಈ ವರ್ಷ ಗ್ರಾಮೀಣ ಭಾಗದ ಜನರಿಂದ ನಗರ ಪ್ರದೇಶದ ಜನರೇ ಹೆಚ್ಚಾಗಿ ಹಬ್ಬದ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ದೃಶ್ಯ ಕಂಡುಬಂದಿತು. ಗಾಂಧಿ ಜಯಂತಿಯ ದಿನದಿಂದ ದೇಶದೆಲ್ಲೆಡೆ ಅಧಿಕೃತವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ ಸಹ ಹಬ್ಬದ ವ್ಯಾಪಾರ ವಹಿವಾಟಿನಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳು ಜನರ ಕೈಯಲ್ಲಿ ಎಗ್ಗಿಲ್ಲದೇ ರಾರಾಜಿಸುತ್ತಿದ್ದವು.