ದಾವಣಗೆರೆ: ಎಲ್ಲೆಡೆ ಈಗ ಮೋಟರ್ ವಾಹನ ಕಾಯ್ದೆಯದ್ದೇ ಸದ್ದು, ದಾಖಲಾತಿಗಳು ಇಲ್ಲದಿದ್ದರೆ ದುಬಾರಿ ತಂಡ ತೆರಬೇಕಾದ ಕಾನೂನು ಬಂದಿದೆ. ಈ ಹಿನ್ನಲೆ ವನಿತಾ ಸಮಾಜದ ಕಚೇರಿಯಲ್ಲಿ ಮೋಟರ್ ವಾಹನ ಕಾಯಿದೆ ಸಾಧಕ-ಬಾಧಕ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು.
ನೂತನ ಮೋಟರ್ ವಾಹನ ಕಾಯಿದೆ ಸಾಧಕ-ಬಾಧಕ ಚರ್ಚೆ - ಪಾಲಿಕೆ ಮಾಜಿ ಸದಸ್ಯ ದಿನೇಶ್ ಶೆಟ್ಟಿ
ಕಾಯಿದೆ ಬೇಕಿದ್ದರೆ ಮಾಡಲಿ. ಆದರೆ, ದುಬಾರಿ ದಂಡ ಪಾವತಿಸುವುದು ಜನರಿಗೆ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಕೆಲವರು ಟ್ರಾಫಿಕ್ ರೂಲ್ಸ್ ಮಾಡುತ್ತೀರಿ ಆದರೆ ವಾಹನ ಚಲಾಯಿಸಲು ರಸ್ತೆಗಳು ಎಷ್ಟು ಸುರಕ್ಷಿತ ಇವೆ ಎಂದು ಪ್ರಶ್ನೆ ಮಾಡಿದರು.
ಸಂವಾದಲ್ಲಿದ್ದ ಮುಖಂಡರಾದ ಹೆಚ್ ಕೆ ರಾಮಚಂದ್ರಪ್ಪ, ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಶೆಟ್ಟಿ ಸೇರಿದಂತೆ ಎಲ್ಲರೂ ಮೋಟರ್ ವಾಹನ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು. ಕಾಯಿದೆ ಬೇಕಿದ್ದರೆ ಮಾಡಲಿ. ಆದರೆ, ದುಬಾರಿ ದಂಡ ಪಾವತಿಸುವುದು ಜನರಿಗೆ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಕೆಲವರು ಟ್ರಾಫಿಕ್ ರೂಲ್ಸ್ ಮಾಡುತ್ತೀರಿ ಆದರೆ ವಾಹನ ಚಲಾಯಿಸಲು ರಸ್ತೆಗಳು ಎಷ್ಟು ಸುರಕ್ಷಿತ ಇವೆ ಎಂದು ಪ್ರಶ್ನೆ ಮಾಡಿದರು.
ಈ ಎಲ್ಲಾ ಪ್ರಶ್ನೆಗಳನ್ನು ಆಲಿಸಿದ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್, 1939 ಹಾಗೂ 1988ರಲ್ಲಿ ಮೋಟರ್ ವಾಹನ ಕಾಯಿದೆ ತಿದ್ದುಪಡಿ ಆಗಿತ್ತು. ಈಗ 2019 ರಲ್ಲಿ ಮತ್ತೆ ತಿದ್ದುಪಡಿ ಆಗಿದೆ. ಶತಮಾನದಷ್ಟು ಕಾಲ ಕಳೆದಿದ್ದರು ಸಹ ನಮ್ಮ ಜನ ಸಂಚಾರಿ ನಿಯಮ ಪಾಲಿಸುತ್ತಿಲ್ಲ, ಇನ್ನೂ ಎಷ್ಟು ವರ್ಷಗಳು ಬೇಕು ಬದಲಾವಣೆಗೆ ಎಂದು ಮರು ಪ್ರಶ್ನೆ ಹಾಕಿದರು.