ಕರ್ನಾಟಕ

karnataka

ETV Bharat / state

'ಮಹಾರಾಷ್ಟ್ರದ ಸಾವಿರ ಜನ ಸಿಎಂಗಳು ಹೇಳಿದ್ರೂ ಬೆಳಗಾವಿ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ' - ಬೆಳಗಾವಿ ವಿಚಾರವಾಗಿ ಉದ್ಧವ ಠಾಕ್ರೆ ಹೇಳಿಕೆಗೆ ಸವದಿ ಖಂಡನೆ

ಇದೊಂದು ರಾಜಕೀಯ ಪ್ರೇರಿತ ಹೇಳಿಕೆ. ಒಬ್ಬ ಸಿಎಂ ಈ ರೀತಿ ಹೇಳಿಕೆ ನೀಡಬಾರದು. ಇದೊಂದು ಅವಿವೇಕಿತನದ ಹೇಳಿಕೆ‌ಯಾಗಿದ್ದು, ಒಬ್ಬ ಸಿಎಂ ಆಗಿ ಅವರು ವಿವೇಚನೆಯಿಂದ ಹೇಳಿಕೆ ನೀಡಬೇಕು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಗೆ ರಾಜ್ಯದ ಡಿಸಿಎಂ ಸವದಿ ತಿರುಗೇಟು ನೀಡಿದ್ದಾರೆ.

DCM Savadi statement against Uddhav Thakre
ಉದ್ಧವ ಠಾಕ್ರೆಗೆ ಡಿಸಿಎಂ ಸವದಿ ತಿರುಗೇಟು

By

Published : Jan 18, 2021, 11:49 AM IST

ದಾವಣಗೆರೆ: ಸಾವಿರ ಜನ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಹೇಳಿದರೂ ಬೆಳಗಾವಿ, ನಿಪ್ಪಾಣಿ ಕರ್ನಾಟಕದಲ್ಲೇ ಇರುತ್ತವೆ. ಮುಂದಾದರೂ ಮಹಾರಾಷ್ಟ್ರ ಸಿಎಂ ಜಾಣತನದ ಹೇಳಿಕೆ‌ ನೀಡಲಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಗೆ ತಿರುಗೇಟು ನೀಡಿದರು.

ಉದ್ಧವ ಠಾಕ್ರೆಗೆ ಡಿಸಿಎಂ ಸವದಿ ತಿರುಗೇಟು

ಬೆಳಗಾವಿ, ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಾವು ಸಿದ್ಧ ಎಂಬ ಮಹಾರಾಷ್ಟ್ರ ಸಿಎಂ ಹೇಳಿಕೆಗೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಸವದಿ, ಬೆಳಗಾವಿ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಈ ಹಿಂದೆಯೇ ನಿರ್ಧಾರವಾಗಿದೆ. ಇದೊಂದು ರಾಜಕೀಯ ಪ್ರೇರಿತ ಹೇಳಿಕೆ. ಒಬ್ಬ ಸಿಎಂ ಈ ರೀತಿ ಹೇಳಿಕೆ ನೀಡಬಾರದು. ಇದೊಂದು ಅವಿವೇಕಿತನದ ಹೇಳಿಕೆ‌ಯಾಗಿದ್ದು, ಒಬ್ಬ ಸಿಎಂ ಆಗಿ ವಿವೇಚನಾಯುತವಾಗಿ ಮಾತನಾಡಬೇಕು. ಸಾವಿರ ಜನರು ಬಂದು ಹೇಳಿದರೂ ಅದು ಸಾಧ್ಯವಿಲ್ಲ. ಇದು ಮುಖ್ಯಮಂತ್ರಿಗಳಿಗೆ ಶೋಭೆ ತರುವಂವಂತಹ ಹೇಳಿಕೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಉದ್ಧವ್ ಠಾಕ್ರೆ 'ಉದ್ಧ'ಟತನದ ಹೇಳಿಕೆಗೆ ಖಂಡನೆ: ಕನ್ನಡಪರ ಹೋರಾಟಗಾರರ ಪ್ರತಿಭಟನೆ

ಅತೃಪ್ತ ಶಾಸಕರು ಸಭೆ ನಡೆಸಿ ದೆಹಲಿ ಪ್ರಯಾಣ ಬೆಳೆಸುತ್ತೇವೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ‌ ಅವದಿ, ಅವರ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಮಾತುಕತೆ ನಡೆಸಬೇಕು. ಸಾರ್ವಜನಿಕವಾಗಿ ಹೇಳಿಕೆ ನೀಡುವುದು ತಪ್ಪು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details