ದಾವಣಗೆರೆ: ಮಳೆಗಾಲದಲ್ಲಿ ಚಿಗುರುವುದಿಲ್ಲ, ಬೇಸಿಗೆಯಲ್ಲಿ ಒಣಗೋದಿಲ್ಲ. ನಾನು ಯಥಾಸ್ಥಿತಿಯಲ್ಲಿ ಇರುತ್ತೇನೆ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಮಾಧ್ಯಮದವರ ಪ್ರಶ್ನೆಗೆ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.
'ನಾನು ಮಳೆಗಾಲದಲ್ಲಿ ಚಿಗುರುವುದಿಲ್ಲ, ಬೇಸಿಗೆಯಲ್ಲಿ ಒಣಗೋದಿಲ್ಲ' - DCM Laxman savadhi spoke about cabinet expansion at Davanagere
ನನಗೆ ಸಚಿವ ಸಂಪುಟ ವಿಸ್ತರಣೆ ಹಾಗು ಪುನರ್ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಡಿಸಿಎಂ ಲಕ್ಷ್ಮಣ್ ಸವದಿ
ನಗರದಲ್ಲಿ ನಡೆದ ಜನಸೇವಕ್ ಸಮಾವೇಶದ ನಂತರ ಮಾತನಾಡಿ, ನನಗೆ ಸಚಿವ ಸಂಪುಟ ವಿಸ್ತರಣೆ ಹಾಗು ಪುನರ್ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಮಂತ್ರಿ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗಿದ್ದು, ಅದರ ಬಗ್ಗೆ ಅವರು ರಾಷ್ಟ್ರೀಯ ನಾಯಕರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ನಾನೂ ಕೂಡ ಸಚಿವಾಕಾಂಕ್ಷಿ, ರಾಜಭವನದಿಂದ ಕರೆ ಬರಬಹುದೆಂದು ಕಾಯುತ್ತಿರುವೆ : ಶಾಸಕ ತೆಲ್ಕೂರ