ದಾವಣಗೆರೆ: ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಇನ್ನೂ ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇನ್ನೂ 2.5ವರ್ಷ ಯಡಿಯೂರಪ್ಪ ಅವರೇ ಸಿಎಂ: ಡಿಸಿಎಂ ಗೋವಿಂದ ಕಾರಜೋಳ - Davangere Latest News
ಕೋವಿಡ್ನಿಂದಾಗಿ ಆರ್ಥಿಕ ಸಂಕಷ್ಟವಿದೆ. ಹೀಗಾಗಿ ಶಾಸಕರಿಗೆ ನಿರೀಕ್ಷಿತ ಪ್ರಮಾಣದ ಅನುದಾನ ನೀಡಲು ಸಾಧ್ಯವಾಗಿಲ್ಲ. ಆರ್ಥಿಕ ಸಂಕಷ್ಟ ದೂರವಾದ ಬಳಿಕ ಪ್ರತಿಯೊಂದು ಶಾಸಕರಿಗೆ ಇಪ್ಪತೈದು ಕೋಟಿ ಅನುದಾನ ನೀಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿನ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕೆಲಸಗಳು ನಡೆಯುತ್ತಿವೆ. ಸಿಎಂ ಅವರು ಶಾಸಕರ ಸಭೆಯನ್ನ ಕರೆದಿದ್ದು, ಈ ವೇಳೆ, ಎಲ್ಲ ಶಾಸಕರು ಹಾಜರಿದ್ದರು. ಕೋವಿಡ್ನಿಂದಾಗಿ ಆರ್ಥಿ ಸಂಕಷ್ಟವಿದೆ. ಹೀಗಾಗಿ ಶಾಸಕರಿಗೆ ನಿರೀಕ್ಷಿತ ಪ್ರಮಾಣದ ಅನುದಾನ ನೀಡಲು ಸಾಧ್ಯವಾಗಿಲ್ಲ. ಆರ್ಥಿಕ ಸಂಕಷ್ಟ ದೂರವಾದ ಬಳಿಕ ಪ್ರತಿಯೊಂದು ಶಾಸಕರಿಗೆ ಇಪ್ಪತೈದು ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ತಿಳಿಸಿದ್ದಾರೆ. 118 ಶಾಸಕರು ಸಿಎಂ ಅವರ ಮಾತಿಗೆ ಸೈ ಎಂದಿದ್ದಾರೆ ಎಂದರು.
ಇನ್ನು, ಪಕ್ಷದ ವಿರುದ್ಧ ಯತ್ನಾಳ್ ಮಾತನಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಷಯ ಪಕ್ಷದ ರಾಜ್ಯಾಧ್ಯಕ್ಷರಿಗೆ, ರಾಜ್ಯ ಉಸ್ತುವಾರಿಗೂ, ರಾಷ್ಟ್ರಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಬಿಜೆಪಿ ವಲಸಿಗರಿಗೆ ಯಾವುದೇ ರೀತಿಯ ಅನ್ಯಾಯವಾಗೋದಿಲ್ಲ. ಯಡಿಯೂರಪ್ಪ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದರು.