ಕರ್ನಾಟಕ

karnataka

ETV Bharat / state

ಪಂಚಮಸಾಲಿ ಸಮಾಜದ ಶ್ರೀಗಳನ್ನು ಡಿಸಿಎಂಗಳು, ಸಚಿವರು ಭೇಟಿ ಮಾಡಿದ್ಯಾಕೆ? - ಅಶ್ವಥ್ ನಾರಾಯಣ್

ವಚನಾನಂದ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದಿದ್ದಾರೆ. ಈ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರೂ ಸಚಿವ ಸಂಪುಟ ವಿಸ್ತರಣೆ ವಿಚಾರ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಈ ನಾಯಕರು ಭೇಟಿಯಾಗಿದ್ದು, ಈ ಬಗ್ಗೆಯೂ ಚರ್ಚೆ ನಡೆದಿರಬಹುದು ಎನ್ನಲಾಗಿದೆ..

Vachanananda Swamiji
ಪಂಚಮಸಾಲಿ ಸಮಾಜದ ಪೀಠ

By

Published : Sep 12, 2020, 3:27 PM IST

ದಾವಣಗೆರೆ :ಹರಿಹರದ ಪಂಚಮಸಾಲಿ ಸಮಾಜದ ಪೀಠಕ್ಕೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವತ್ಥ್‌ ನಾರಾಯಣ, ಸಚಿವ ಬೈರತಿ ಬಸವರಾಜ್, ಸಂಸದ ಜಿ ಎಂ ಸಿದ್ದೇಶ್ವರ್ ಭೇಟಿ ನೀಡಿದರು.

ಈ ವೇಳೆ ವಚನಾನಂದ ಸ್ವಾಮೀಜಿ ಜೊತೆ ಡಿಸಿಎಂ ಹಾಗೂ ಸಚಿವರು ಮಾತುಕತೆ ನಡೆಸಿದರು‌‌. ಹೊನ್ನಾಳಿಗೆ ಆಗಮಿಸುವ ಮುನ್ನ ಮಠಕ್ಕೆ ಭೇಟಿ‌ ನೀಡಿ ಸಮಾಲೋಚನೆ ನಡೆಸಿರೋದು ತೀವ್ರ ಕುತೂಹಲ‌ ಕೆರಳಿಸಿದೆ.

ವಚನಾನಂದ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದಿದ್ದಾರೆ. ಈ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರೂ ಸಚಿವ ಸಂಪುಟ ವಿಸ್ತರಣೆ ವಿಚಾರ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಈ ನಾಯಕರು ಭೇಟಿಯಾಗಿದ್ದು, ಈ ಬಗ್ಗೆಯೂ ಚರ್ಚೆ ನಡೆದಿರಬಹುದು ಎನ್ನಲಾಗಿದೆ.

ಶ್ರೀಗಳು ಯೋಗ ಗುರು ಆಗಿರುವುದರಿಂದ ಆರೋಗ್ಯದ ಬಗ್ಗೆ ಗೋವಿಂದ ಕಾರಜೋಳ, ಅಶ್ವತ್ಥ್‌ ನಾರಾಯಣ್, ಬಸವರಾಜ್, ಜಿ‌ ಎಂ ಸಿದ್ದೇಶ್ವರ್ ಕೆಲ ಟಿಪ್ಸ್ ಪಡೆದುಕೊಂಡಿದ್ದಾರೆ. ಮಾತ್ರವಲ್ಲ, ಶ್ರೀಪೀಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ABOUT THE AUTHOR

...view details