ಕರ್ನಾಟಕ

karnataka

ETV Bharat / state

ನಿರಾಶ್ರಿತರ ಕೇಂದ್ರಕ್ಕೆ ದಾವಣಗೆರೆ ಡಿಸಿ ದಿಢೀರ್ ಭೇಟಿ: ಆಹಾರ ಗುಣಮಟ್ಟ, ಸ್ವಚ್ಛತೆಯ ಪರಿಶೀಲನೆ - ತುರ್ಚಘಟ್ಟದ ನಿರಾಶ್ರಿತರ ಕೇಂದ್ರಕ್ಕೆ ದಾವಣಗೆರೆ ಡಿಸಿ ಭೇಟಿ

ತುರ್ಚಘಟ್ಟದ ನಿರಾಶ್ರಿತರ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಅಡುಗೆ ಕೋಣೆ, ಆಹಾರ ಸಾಮಗ್ರಿ, ದವಸ ಧಾನ್ಯ ದಾಸ್ತಾನು ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ತರಕಾರಿ, ನೀರು ಹಾಗೂ ಆಹಾರಗಳ ಗುಣಮಟ್ಟ ಪರಿಶೀಲಿಸಿದರು.

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿಸಿ: ತುರ್ಚಘಟ್ಟದ ನಿರಾಶ್ರಿತರ ಕೇಂದ್ರಕ್ಕೆ ದಿಢೀರ್ ಭೇಟಿ, ಪರಿಶೀಲನೆ

By

Published : Nov 1, 2019, 7:18 PM IST

ದಾವಣಗೆರೆ:ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ಮೂಲಕ ನೌಕರರಿಗೆ ಎಚ್ಚರಿಕೆ ನೀಡುತ್ತಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇಂದು ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದರು.

ತುರ್ಚಘಟ್ಟದ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಪರಿಶೀಲನೆ

ತಾಲೂಕಿನ ತುರ್ಚಘಟ್ಟದ ನಿರಾಶ್ರಿತರ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದ ಅವರು, ಅಡುಗೆ ಕೋಣೆ, ಆಹಾರ ಸಾಮಗ್ರಿ, ದವಸ ಧಾನ್ಯ ದಾಸ್ತಾನು ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ತರಕಾರಿ, ನೀರು ಹಾಗೂ ಆಹಾರಗಳ ಗುಣಮಟ್ಟ ಪರಿಶೀಲಿಸಿದರು.

ಇನ್ನು, ನಿರಾಶ್ರಿತರ ಕೇಂದ್ರದ ಸ್ವಚ್ಛತೆ, ಕಾರ್ಯವಿಧಾನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿಟ್ಟುಕೊಂಡು ಮಾನವೀಯತೆಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಮಾತ್ರವಲ್ಲ, ಆಹಾರ ಸಾಮಗ್ರಿಗಳಾಗಲೀ, ಸರ್ಕಾರದಿಂದ ಸಿಗುವ ಇತರೆ ಸೌಲಭ್ಯಗಳಾಗಲೀ ದುರುಪಯೋವಾಗದಂತೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡಿದರು. ಇನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೂ ಡಿಸಿ ಭೇಟಿ ನೀಡಿದ್ದರು.

For All Latest Updates

TAGGED:

ABOUT THE AUTHOR

...view details