ದಾವಣಗೆರೆ: ಹೊಸ ವರ್ಷಕ್ಕೆ ಪ್ಲಾನ್ ಹಾಕಿಕೊಂಡು ಹೊರಹೋಗಿ ಬೇಕಾದ ಪ್ರದೇಶದಲ್ಲಿ ಪಾರ್ಟಿ ಮಾಡುತ್ತೇನೆ ಎಂದುಕೊಂಡರೆ ಜೋಕೆ. ಬೇಕಾದ ಬಯಲು ಪ್ರದೇಶಗಳಲ್ಲಿ ಪಾರ್ಟಿ ಹಾಗೂ ಕ್ರಿಸ್ಮಸ್ ಸೇರಿದಂತೆ ಹೊಸ ವರ್ಷಾಚರಣೆ ಮಾಡದಂತೆ ದಾವಣಗೆರೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿದರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗೆ ಸಾರ್ವಜನಿಕ ಸ್ಥಳಗಳು, ರಸ್ತೆಗಳು, ಉದ್ಯಾನಗಳನ್ನು ಬಳಕೆ ಮಾಡಿಕೊಳ್ಳುವಂತಿಲ್ಲ. ಸರ್ಕಾರದಿಂದ ಆದೇಶ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಇನ್ನು ಹೊಸ ವರ್ಷ ಆಚರಣೆಗೆ ಕ್ಲಬ್ ಪಬ್ ಹಾಗೂ ರೆಸ್ಟೋರೆಂಟ್ ಹೋಟೆಲ್ಗಳಲ್ಲಿ ನೃತ್ಯ, ಡಿಜೆ ಸದ್ದನ್ನು ಖಾಸಗಿ ಸ್ಥಳಗಳಲ್ಲಿ ಮಾಡುವಂತಿಲ್ಲ. ಇದಲ್ಲದೆ ಉದ್ಯಾನ ಹಾಗೂ ಆಟದ ಮೈದಾನಗಳಲ್ಲಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಸಂದೇಶ ರವಾನಿಸಿದರು.
ಇದಲ್ಲದೆ ಶಾಂತಿ ಸಾಗರ, ಕೊಂಡಜ್ಜಿಕೆರೆ, ಆನಗೋಡಿನ ಪ್ರಿಯದರ್ಶಿನಿ ಉದ್ಯಾನದಂತಹ ಬಯಲು ಪ್ರದೇಶಗಳಲ್ಲಿ ಯಾವುದೇ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಓದಿ:ಬೆಂಗಳೂರಿನ ಮಸೀದಿ ಕಾಂಪ್ಲೆಕ್ಸ್ನಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ