ಕರ್ನಾಟಕ

karnataka

ETV Bharat / state

ದಾವಣಗೆರೆ: ಅಗತ್ಯ ಸೇವೆಗಳ ನಿರ್ವಹಣೆಗೆ ತಾಲೂಕು ಕಮಾಂಡರ್ ಗಳ ನೇಮಕ - ದಾವಣಗೆರೆ ಕೋವಿಡ್-19 ಸುದ್ದಿ

ದಾವಣಗೆರೆಗೆ ಉಪ ವಿಭಾಗಾಧಿಕಾರಿ, ಹರಿಹರ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ, ಜಗಳೂರು ತಹಶೀಲ್ದಾರರನ್ನು ಇನ್ಸಿಡೆಂಟ್ ಕಮ್ಯಾಂಡರ್ಸ್ ಆಗಿ ನೇಮಿಸಲಾಗಿದೆ

Davanagere
ದಾವಣಗೆರೆ

By

Published : Mar 29, 2020, 5:03 PM IST

ದಾವಣಗೆರೆ: ಕೋವಿಡ್-19 ಸೋಂಕು ಹರಡುವಿಕೆ ತಡೆಗೆ, ಆರೋಗ್ಯ ಸೌಲಭ್ಯ ಸೇರಿದಂತೆ ಅಗತ್ಯ ಸೇವೆಗಳನ್ನು ಜಿಲ್ಲೆಯಾದ್ಯಂತ ಒದಗಿಸಲು ಅನುಕೂಲವಾಗುವಂತೆ ತಾಲೂಕು ಕಮಾಂಡರ್ ಗಳನ್ನು ಜಿಲ್ಲಾಧಿಕಾರಿ‌ ಮಹಾಂತೇಶ್ ಆರ್. ಬೀಳಗಿ ನೇಮಕ‌ ಮಾಡಿದ್ದಾರೆ.

ದಾವಣಗೆರೆಗೆ ಉಪ ವಿಭಾಗಾಧಿಕಾರಿ, ಹರಿಹರ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ, ಜಗಳೂರು ತಹಶೀಲ್ದಾರರನ್ನು ಇನ್ಸಿಡೆಂಟ್ ಕಮ್ಯಾಂಡರ್ಸ್ ಆಗಿ ನೇಮಿಸಲಾಗಿದೆ. ಈ ಕಮಾಂಡರ್‍ಗಳು ಆರೋಗ್ಯ ಸೌಲಭ್ಯಗಳು ಸೇರಿದಂತೆ ಇತರೆ ಅಗತ್ಯ ವಸ್ತುಗಳು ಜನರಿಗೆ ನಿರಾಂತಕವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಿದ್ದಾರೆ.

ABOUT THE AUTHOR

...view details