ಕರ್ನಾಟಕ

karnataka

ETV Bharat / state

Jobs in Davanagere: ದಾವಣಗೆರೆ ಜಿಲ್ಲಾ ಪಂಚಾಯತ್​ನಲ್ಲಿವೆ ವಿವಿಧ ಹುದ್ದೆ.. ಬೇಗ ಅರ್ಜಿ ಸಲ್ಲಿಸಿ - ಹುದ್ದೆಗಳ ಭರ್ತಿಗೆ ಅಧಿಸೂಚನೆ

ಹೊರ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಒಟ್ಟು 20 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆ ಆಯ್ಕೆ, ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

Davangere Zilla Panchayat Recruitment for various post
Davangere Zilla Panchayat Recruitment for various post

By

Published : Aug 14, 2023, 4:36 PM IST

ದಾವಣಗೆರೆ ಜಿಲ್ಲಾ ಪಂಚಾಯತ್​ನಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೊರ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಒಟ್ಟು 20 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆ ಆಯ್ಕೆ, ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಅಧಿಸೂಚನೆ

ಹುದ್ದೆ ವಿವರ: ತಾಂತ್ರಿಕ ಸಹಾಯಕ (ಸಿವಿಲ್​)- 4, ತಾಂತ್ರಿಕ ಸಹಾಯಕ (ಕೃಷಿ)- 1, ತಾಂತ್ರಿಕ ಸಹಾಯಕ (ತೋಟಗಾರಿಕೆ)- 6, ತಾಂತ್ರಿಕ ಸಹಾಯಕ (ಅರಣ್ಯ)- 2, ತಾಂತ್ರಿಕ ಸಹಾಯಕ (ರೇಷ್ಮೆ)-1, ಆಡಳಿತ ಸಹಾಯಕರು -6

ವಿದ್ಯಾರ್ಹತೆ

ತಾಂತ್ರಿಕ ಸಹಾಯಕರು: ಸಿವಿಲ್​ನಲ್ಲಿ ಬಿಇ ಪದವಿ

ತಾಂತ್ರಿಕ ಸಹಾಯಕರು (ಕೃಷಿ): ಅಭ್ಯರ್ಥಿಗಳು ಕೃಷಿ ವಿಷಯದಲ್ಲಿ ಬಿಎಸ್ಸಿ ಪದವಿ

ತಾಂತ್ರಿಕ ಸಹಾಯಕರು (ತೋಟಗಾರಿಕೆ): ತೋಟಗಾರರಿಕೆಯಲ್ಲಿ ಬಿಎಸ್ಸಿ ಪದವಿ

ತಾಂತ್ರಿಕ ಸಹಾಯಕರು (ಅರಣ್ಯ): ಅರಣ್ಯಶಾಸ್ತ್ರದಲ್ಲಿ ಬಿಎಸ್ಸಿ ಪದವಿ

ತಾಂತ್ರಿಕ ಸಹಾಯಕ (ರೇಷ್ಮೆ): ರೇಷ್ಮೆಯಲ್ಲಿ ಬಿಎಸ್ಸಿ ಪದವಿ

ಆಡಳಿತ ಸಹಾಯಕರು: ಬಿಕಾಂ ಪದವಿ ಜೊತೆಗೆ ಕಂಪ್ಯೂಟರ್​ ಜ್ಞಾನ

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21ರಿಂದ ಗರಿಷ್ಠ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವೇತನ: ಆಡಳಿತ ಸಹಾಯಕರ ಹುದ್ದೆಗೆ 22 ಸಾವಿರ ಹುದ್ದೆ ನಿಗದಿ ಪಡಿಸಲಾಗಿದೆ. ಉಳಿದ ಹುದ್ದೆಗಳಿಗೆ 28 ಸಾವಿರ ವೇತನ ಜೊತೆಗೆ ಪ್ರತ್ಯೇಕ ಭತ್ಯೆ 2000 ರೂ. ಇರಲಿದೆ.

ಆಯ್ಕೆ ವಿಧಾನ: ಈ ಹುದ್ದೆಗಳನ್ನು ಮೆರಿಟ್​ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಡಳಿತ ಸಹಾಯಕ ಹುದ್ದೆಗೆ ಶಾರ್ಟ್​ ಲಿಸ್ಟ್​ ಮಾಡಿರುವ ಅಭ್ಯರ್ಥಿಗಳ ಕನ್ನಡ ಮತ್ತು ಇಂಗ್ಲಿಷ್​ ಟೈಪಿಂಗ್​ ಮತ್ತು ಕಂಪ್ಯೂಟರ್​ ಜ್ಞಾನ ಸಂಬಂಧ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು.

ವಿಶೇಷ ಸೂಚನೆ: ಮೇಲಿನ ಹುದ್ದೆಗಳಲ್ಲಿ ಅಭ್ಯರ್ಥಿಗಳು 1 ರಿಂದ 2 ವರ್ಷ ಹುದ್ದೆ ಕಾರ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ ಆಗಸ್ಟ್​​ 10 ರಿಂದ ಆಗಸ್ಟ್​​ 24 ಆಗಿದೆ. ಅಭ್ಯರ್ಥಿಗಳು ದಾವಣಗೆರೆ ಜಿಲ್ಲೆ ಅಧಿಕೃತ ವೆಬ್​ಸೈಟ್​​ ಮೂಲಕ ಅರ್ಜಿ ಸಲ್ಲಿಸಬೇಕು.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ davanagere.nic.in ಈ ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: Jobs in Koppal: ಕೊಪ್ಪಳ ಜಿಲ್ಲಾ ಪಂಚಾಯತ್​ನಲ್ಲಿ ಉದ್ಯೋಗಾವಕಾಶ.. 13 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details