ದಾವಣಗೆರೆ: ಮತ ಎಣಿಕೆ ಕೇಂದ್ರಗಳ ಬಳಿ ಅನವಶ್ಯಕವಾಗಿ ನಿಂತಿದ್ದವರ ಮೇಲೆ ತಹಶೀಲ್ದಾರ್ ಗಿರೀಶ್ ಗರಂ ಆಗಿದ್ದಾರೆ.
ದಾವಣಗೆರೆ: ಮತ ಎಣಿಕೆ ಕೇಂದ್ರದ ಬಳಿ ಅನವಶ್ಯಕವಾಗಿ ನಿಂತಿದ್ದವರ ಮೇಲೆ ತಹಶೀಲ್ದಾರ್ ಗರಂ - Tahsildar outrage
ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಗಿರೀಶ್ ಪರಿಶೀಲನೆ ನಡೆಸಿ, ಮತ ಎಣಿಕೆ ಕೇಂದ್ರದ ಬಳಿ ಅನವಶ್ಯಕವಾಗಿ ನಿಂತಿದ್ದ ಏಜೆಂಟ್ ಹಾಗೂ ಕೆಲ ಅಭ್ಯರ್ಥಿಗಳ ಮೇಲೆ ಗರಂ ಆಗಿದ್ದಾರೆ.
ದಾವಣಗೆರೆ ತಾಲೂಕಿನ ಒಟ್ಟು 38 ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಗಿರೀಶ್ ಪರಿಶೀಲನೆ ನಡೆಸಿ ಮತ ಎಣಿಕೆ ಕೇಂದ್ರದ ಬಳಿ ಅನವಶ್ಯಕವಾಗಿ ನಿಂತಿದ್ದ ಏಜೆಂಟ್ ಹಾಗೂ ಕೆಲ ಅಭ್ಯರ್ಥಿಗಳ ಮೇಲೆ ಗರಂ ಆಗಿದ್ದಾರೆ. ಬಳಿಕ ಮತ ಎಣಿಕೆ ಕೇಂದ್ರದ ಬಳಿ ನಿಲ್ಲದಂತೆ ಆದೇಶಿಸಿದರು.
ಮತ ಎಣಿಕೆ ಕೇಂದ್ರದ ಬಳಿ ಯಾರೂ ಅನವಶ್ಯಕವಾಗಿ ಬರದಂತೆ ತಡೆಯಲು ನಿಯೋಜನೆ ಮಾಡಿದ್ದ ಪೋಲಿಸರ ಮೇಲೂ ತಹಶೀಲ್ದಾರ್ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜನರನ್ನು ಒಳ ಬಿಡದಂತೆ ಪೋಲಿಸರಿಗೆ ತಿಳಿಸಿದರು. ಇನ್ನು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಬಳಸುವ ಏಜೆಂಟ್ ಪಾಸ್ಗಳನ್ನು ಆಯಾ ಪಂಚಾಯತ್ ಮತ ಎಣಿಕೆ ಕಾರ್ಯ ಮುಗಿದ ಬಳಿಕ ವಾಪಸ್ ಪಡೆದುಕೊಳ್ಳಲಾಯಿತು.