ದಾವಣಗೆರೆ:ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಸಿನಿಮಾ ಇಡೀ ದೇಶದಲ್ಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸಿನಿ ಪ್ರಿಯರನ್ನು ಆಕರ್ಷಿಸಿರುವ ಈ ಸಿನಿಮಾವನ್ನು ವೀಕ್ಷಿಸಲು ಪೊಲೀಸರು ಥಿಯೇಟರ್ಗೆ ಲಗ್ಗೆ ಇಟ್ಟಿದ್ದಾರೆ.
ದಾವಣಗೆರೆ ನಗರದ ಎಲ್ಲ ಪೊಲೀಸರು ನಿನ್ನೆ ಸಂಜೆ ಇಡೀ ಥಿಯೇಟರ್ ಬುಕ್ ಮಾಡಿ ಕುಟುಂಬ ಸಮೇತರಾಗಿ ಹೋಗಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದಾರೆ. ವಿಶೇಷವೆಂದರೆ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ, ಎಸ್ಪಿ ರಿಷ್ಯಂತ್ ಕೂಡ ದಾವಣಗೆರೆ ನಗರದ ಗೀತಾಂಜಲಿ ಸಿನಿಮಾ ಮಂದಿರಕ್ಕೆ ಆಗಮಿಸಿ ಕಾಂತಾರ ಸಿನಿಮಾ ಕಣ್ತುಂಬಿಕೊಂಡರು.