ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಸಿಬ್ಬಂದಿಗೆ ಎಸ್ಪಿ ಸೂಚನೆ - ದಾವಣಗೆರೆ: ಮುಂಜಾಗ್ರತ ಕ್ರಮವಾಗಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ಲಾಕ್​ಡೌನ್​ ಹಿನ್ನೆಲೆ ಪೊಲೀಸ್ ಡಿಆರ್ ಗ್ರೌಂಡ್​ನಲ್ಲಿ ಗಸ್ತು ತಿರುಗುವ ಎಲ್ಲಾ ವಾಹನಗಳ ಪೊಲೀಸ್ ಸಿಬ್ಬಂದಿಗೆ ಹೇಗೆ ಕರ್ತವ್ಯ ನಿರ್ವಹಿಸಬೇಕೆಂಬ ಬಗ್ಗೆ ತಿಳಿಸಲು ಸಭೆ ನಡೆಸಲಾಗಿದೆ.

Davangere
ದಾವಣಗೆರೆ: ಮುಂಜಾಗ್ರತ ಕ್ರಮವಾಗಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

By

Published : Apr 17, 2020, 4:57 PM IST

Updated : Apr 17, 2020, 9:32 PM IST

ದಾವಣಗೆರೆ:ಲಾಕ್​ಡೌನ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ನಗರದ ಪೊಲೀಸ್ ಡಿಆರ್ ಗ್ರೌಂಡ್​ನಲ್ಲಿ ಗಸ್ತು ತಿರುಗುವ ಎಲ್ಲಕಾ ವಾಹನಗಳ ಪೊಲೀಸ್ ಸಿಬ್ಬಂದಿಗೆ ಹೇಗೆ ಕರ್ತವ್ಯ ನಿರ್ವಹಿಸಬೇಕೆಂಬ ಬಗ್ಗೆ ಸಲಹೆ ನೀಡಿದರು.

ದಾವಣಗೆರೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರ ಓಡಾಟ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೈವೇಯಲ್ಲಿ ಕಾರ್ಯನಿರ್ವಹಿಸುವುದೂ ಸೇರಿದಂತೆ ಗಸ್ತು ತಿರುಗುವ ಎಲ್ಲಾ ಪೊಲೀಸ್ ವಾಹನಗಳ ಚಾಲಕರು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದರು.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾಬಾಗಳಲ್ಲಿ ಕೇವಲ ಆಹಾರವನ್ನು ಪಾರ್ಸಲ್‌ ಕೊಂಡೊಯ್ಯಲು ಅನುಮತಿ ನೀಡಿ. ಜನಸಂದಣಿ ಹೆಚ್ಚಾದರೆ ಕೂಡಲೇ ಕ್ರಮ ಕೈಗೊಳ್ಳಿ. ಜನರು ಅನವಶ್ಯಕವಾಗಿ ತಿರುಗಾಡಿದರೆ ಕಟ್ಟುನಿಟ್ಟಾಗಿ ಸೂಚನೆ ನೀಡಿ. ಪದೇ ಪದೆ ಈ ರೀತಿಯಲ್ಲಿ ಉಲ್ಲಂಘನೆ ಮಾಡುವವರನ್ನು ಬಿಡಬೇಡಿ ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

Last Updated : Apr 17, 2020, 9:32 PM IST

For All Latest Updates

ABOUT THE AUTHOR

...view details