ದಾವಣಗೆರೆ: ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 11 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 25 ಕೆ.ಜಿ 800 ಗ್ರಾಂ ಗಾಂಜಾವನ್ನು ಎಸ್ಪಿ ಸಿ ಬಿ ರಿಷ್ಯಂತ್ ಅವರ ನೇತೃತ್ವದಲ್ಲಿ ಪೊಲೀಸರು ಬೆಂಕಿ ಹಂಚಿ ನಾಶಪಡಿಸಿದರು.
ಮಾದಕ ವಸ್ತು ವಿರೋಧಿ ದಿನ: 25ಕೆ.ಜಿ ಗಾಂಜಾ ಸುಟ್ಟು ಹಾಕಿದ ದಾವಣಗೆರೆ ಪೊಲೀಸರು - Davangere police burned marijuana
11 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 25 ಕೆ.ಜಿ 800 ಗ್ರಾಂ ಗಾಂಜಾವನ್ನು ಪೊಲೀಸರು ಬೆಂಕಿ ಹಂಚಿ ನಾಶಪಡಿಸಿದರು.
: 25ಕೆ.ಜಿ ಗಾಂಜಾವನ್ನು ಸುಟ್ಟು ಹಾಕಿದ ದಾವಣಗೆರೆ ಪೊಲೀಸರು
ನ್ಯಾಯಾಲಯದ ಅನುಮತಿ ಪಡೆದು ನಗರದ ಹೊರ ವಲಯದಲ್ಲಿ ಪೊಲೀಸ್ ವಿರಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಉಪಸ್ಥಿತಿಯಲ್ಲಿ ಗಾಂಜಾಗೆ ಬೆಂಕಿ ಹಚ್ಚಿ ನಾಶಪಡಿಸಲಾಯಿತು. ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅರ್.ಬಿ ಬಸರಗಿ, ಡಿಸಿಆರ್ಬಿ ಡಿವೈಎಸ್ಪಿ ಬಿ.ಎಸ್ ಬಸವರಾಜ್, ಚನ್ನಗಿರಿ ಡಿವೈಎಸ್ಪಿ ಸಂತೋಷ್ ಕೆ.ಎಂ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಯಾದಗಿರಿ: ಸೋದರ ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭಿಣಿ