ಕರ್ನಾಟಕ

karnataka

ETV Bharat / state

134 ಪ್ರಕರಣ ಭೇದಿಸಿ, 1 ಕೋಟಿ 68 ಲಕ್ಷ ಮೌಲ್ಯದ ವಸ್ತುಗಳನ್ನು ವಾಪಸ್​ ಮಾಡಿದ ದಾವಣಗೆರೆ ಪೊಲೀಸರು - ಎಎಸ್ಪಿ ರಾಮಗೊಂಡನ ಬಿ ಬಸರಗಿ

ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಉಪ - ವಿಭಾಗದ ಪೊಲೀಸರು ಕಳ್ಳತನವಾಗಿದ್ದ 1 ಕೋಟಿ 68 ಲಕ್ಷ ಮೌಲ್ಯದ ವಸ್ತುಗಳನ್ನು ಕಾರ್ಯಾಚರಣೆ ನಡೆಸಿ ವಾರಸುದಾರರಿಗೆ ಮರಳಿಸಿದ್ದಾರೆ.

ವಶಕ್ಕೆ ಪಡೆದ ವಸ್ತುಗಳೊಂದಿಗೆ ಪೊಲೀಸರು
ವಶಕ್ಕೆ ಪಡೆದ ವಸ್ತುಗಳೊಂದಿಗೆ ಪೊಲೀಸರು

By

Published : Aug 3, 2023, 9:24 AM IST

Updated : Aug 3, 2023, 3:43 PM IST

ಪಾರ್ಪಟಿ ರಿಟರ್ನ್​ ಪರೇಡ್​ ಕಾರ್ಯಕ್ರಮ

ದಾವಣಗೆರೆ:ಜಿಲ್ಲೆಯ ಗ್ರಾಮಾಂತರ ಉಪ - ವಿಭಾಗದ ವಿವಿಧ ಠಾಣೆಗಳ ಪೊಲೀಸರು ಭರ್ಜರಿ ಕಳವು ಕಾರ್ಯಾಚರಣೆ ನಡೆಸಿದ್ದಾರೆ. ಜನಸಾಮಾನ್ಯರ ಮನೆಗಳಿಂದ ಕಳವಾಗಿದ್ದ ಬಂಗಾರ ಬೆಳ್ಳಿ, ವಾಹನ, ನಗದು ಹೀಗೆ ಪ್ರತಿಯೊಂದನ್ನು ವಸ್ತುಗಳನ್ನು ವಾರಸುದಾರರಿಗೆ ಪೊಲೀಸರು ಮರಳಿ ಸಿಗುವಂತೆ ಮಾಡಿದ್ದಾರೆ.

1 ಕೋಟಿ 68 ಲಕ್ಷ ಮೌಲ್ಯದ ಕಳುವಾಗಿದ್ದ ವಸ್ತುಗಳನ್ನು ಹುಡುಕಿಕೊಡಿ ಸ್ವಾಮಿ ಎಂದು ದೂರು ಕೊಟ್ಟು ಸುಮ್ಮನಾಗಿದ್ದ ಜನರಿಗೆ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಆಯಾ ವಾರಸುದಾರರಿಗೆ ಚಿನ್ನ ಬೆಳ್ಳಿ ಮರಳಿ ದೊರೆಯುವಂತೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದು, ಈ ಪ್ರಕರಣಗಳಿಂದ ಜಿಲ್ಲಾ ಪೊಲೀಸ್​ ಅಧಿಕಾರಿಗಳು ಕೂಡ ರೋಸಿ ಹೋಗಿದ್ದರು. ಎಸ್ಪಿ ಡಾ ಅರುಣ್ ಕೆ ಅವರ ಅವಧಿಯಲ್ಲಿ ಸಾಕಷ್ಟು ಮನೆಗಳ್ಳತನ, ಚಿನ್ನ, ಬೆಳ್ಳಿ ನಗದು ಸೇರಿದಂತೆ ದ್ವಿಚಕ್ರ, ಕಾರು, ಆಟೋ ಹೀಗೆ ಸಾಕಷ್ಟು ವಸ್ತುಗಳು ಕಳ್ಳತನವಾಗಿದ್ದವು. ಈ ಎಲ್ಲ ಪ್ರಕರಣಗಳನ್ನು ಭೇದಿಸಬೇಕೆಂದು ತಂಡ ಕಟ್ಟಿದ ಎಸ್ಪಿ ಡಾ ಅರುಣ್ ಕೆ ಅವರು ಕಳ್ಳರನ್ನು ಮಟ್ಟ ಹಾಕಲು ಆಪರೇಷನ್ ಶುರು ಮಾಡಿ ಯಶಸ್ವಿಯಾಗಿದ್ದಾರೆ.

ಕೇವಲ ಒಂದುವರೆ ವರ್ಷದಲ್ಲಿ 134ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿರುವ ಕೀರ್ತಿ ದಾವಣಗೆರೆ ಜಿಲ್ಲಾ ಪೊಲೀಸರಿಗೆ ಸಲ್ಲುತ್ತದೆ. ಇನ್ನು ಕಳ್ಳತನದಿಂದ ಕಳೆದುಕೊಂಡಿದ್ದ ಬಂಗಾರ ಬೆಳ್ಳಿ ವಸ್ತುಗಳು, ನಗರದ ಹಾಗೂ ವಾಹನಗಳನ್ನು ಆಯಾ ವಾರಸುದಾರರಿಗೆ ಬುಧವಾರ ಎಎಸ್ಪಿ ರಾಮಗೊಂಡನ ಬಿ ಬಸರಗಿಯವರ ನೇತೃತ್ವದಲ್ಲಿ ಎಲ್ಲರಿಗೂ ಹಸ್ತಾಂತರಿಸಲಾಯಿತು.

ತಮ್ಮ ವಸ್ತುಗಳು ತಮಗೆ ವಾಪಾಸ್​ ಆಗಿರುವುದರಿಂದ ಜನರ ಸಂತಸಕ್ಕೆ ಪಾರವೇ ಇರಲಿಲ್ಲ. ದಾವಣಗೆರೆ ಗ್ರಾಮಾಂತರ ಉಪವಿಭಾಗದ ಕನಿಕ ಸಕ್ರಿವಾಲ್ (ವರ್ಗಾವಣೆ ಗೊಂಡಿದ್ದಾರೆ) ರವರ ನೇತೃತ್ವದಲ್ಲಿ ಪೊಲೀಸ್​ ಸಿಬ್ಬಂದಿಯ ತಂಡ ಒಟ್ಟು 134 ಪ್ರಕಣಗಳನ್ನು ಭೇದಿಸಿದ್ದು, ಈ ಕುರಿತು ಎಎಸ್ಪಿ ರಾಮಗೊಂಡನ ಬಿ ಬಸರಗಿಯವರು ಮಾಹಿತಿ ನೀಡಿದ್ದಾರೆ.

16 ದ್ವಿಚಕ್ರ ವಾಹನ, ಒಂದು‌ ಟ್ರ್ಯಾಕ್ಟರ್ ಹಾಗೂ ಬಿಡಿ ಭಾಗಗಳು, 178 ಕೆಜಿ ಅಡಕೆ, 03 ಮೊಬೈಲ್ ಹಸ್ತಾಂತರ ಮಾಡಲಾಯಿತು. ಇದಲ್ಲದೆ 02 ಲಕ್ಷ 31,650 ಸಾವಿರದ್ದಷ್ಟು ಹಣ, 01 ಕೆಜಿ 713 ಗ್ರಾಂ ಚಿನ್ನಾಭರಣ, ೦2 ಕೆಜಿ 737 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕಳ್ಳರಿಂದ ಒಟ್ಟು 1,68,96,744 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಾಲಾಗಿತ್ತು. ಇನ್ನು ಮುಂದೆ ಜನ ಎಚ್ಚರ ವಹಿಸಬೇಕೆಂದು ಮನವಿ ಮಾಡಿದ್ದಾರೆ.

134 ಪ್ರಕರಣಗಳಲ್ಲಿ ಗಂಭೀರವಾದ ಪ್ರಕರಣ ಎಂದರೆ ಜಗಳೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 26 ತೊಲ ಬಂಗಾರ ಕಳುವಾಗಿತ್ತು. ಕಳುವಾಗಿದ್ದ ಮಂಜುನಾಥ್ ಎಂಬುವರಿಗೆ ಸೇರಿದ ಬಂಗಾರವನ್ನು ಹಾಸನ ಹಾಗೂ ಚನ್ನಪಟ್ಟಣಕ್ಕೆ ಜಗಳೂರು ಪೊಲೀಸರು ತೆರಳಿ ಕಳ್ಳರ ಹೆಡೆಮುರಿ ಕಟ್ಟಿ ಬಂಗಾರವನ್ನು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರ ಮಾಡಿದರು.

ಈ ವೇಳೆ ವಾರಸುದಾರರಾದ ಮಂಜುನಾಥ ಪ್ರತಿಕ್ರಿಯಿಸಿ ಮನೆಯಲ್ಲಿ ಕಳ್ಳತನ ಆಗಿತ್ತು, ಮನೆಯಲ್ಲಿರಿಸಿದ್ದ 26 ತೊಲ ಬಂಗಾರ ಕಳವಾಗಿತ್ತು. ಮರಳಿ ಸಿಗುವಂತೆ ಮಾಡಿದ ಪೊಲೀಸರಿಗೆ ಕೃತಜ್ಞತೆ. ಇನ್ನು ಕಳುವಾಗಿರುವ ನಾಲ್ಕು ಕೆಜಿ ಬೆಳ್ಳಿ ಸಿಕ್ಕಿಲ್ಲ ಸಿಗಬೇಕಾಗದೆ ಎಂದರು.

ಇದನ್ನೂ ಓದಿ:ಕ್ಯಾಬ್​ನಲ್ಲಿ ಮಾತನಾಡುವಾಗ ಎಚ್ಚರ: ಪರ್ಸನಲ್ ವಿಚಾರ ಮಾತನಾಡಿ ₹22 ಲಕ್ಷ, ಮುಕ್ಕಾಲು ಕೆಜಿ ಚಿನ್ನಾಭರಣ ಕಳೆದುಕೊಂಡ ಮಹಿಳೆ

Last Updated : Aug 3, 2023, 3:43 PM IST

ABOUT THE AUTHOR

...view details