ಕರ್ನಾಟಕ

karnataka

ETV Bharat / state

ಭಾರೀ‌‌ ಮಳೆಯಿಂದ ಈರುಳ್ಳಿ ಬೆಳೆ ನಾಶ: ಕಂಗಾಲಾದ ರೈತರು - Onion crops destroyed

ಭಾರೀ‌‌ ಮಳೆ ಹಾಗೂ ಬೆಳೆ ನಾಶವಾದ ಕಾರಣ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ನಿರಂತರ ಮಳೆಯಂದ ಜಮೀನಿನಲ್ಲಿ‌‌ ನೀರು ನಿಂತಿರುವ ಕಾರಣ ಹಾಗೂ ಇಳುವರಿ ಕುಂಠಿತವಾಗಿರುವುದರಿಂದ ಒಂದು ಎಕರೆಯಲ್ಲಿ‌ ಕೇವಲ ಶೇ. 30ರಿಂದ 40ರಷ್ಟು ಬೆಳೆ ಬಂದಿದೆ.

Onion crops destroyed by heavy rain
ಭಾರೀ‌‌ ಮಳೆಯಿಂದ ಈರುಳ್ಳಿ ಬೆಳೆ ನಾಶ: ಕಂಗಾಲಾದ ರೈತರು

By

Published : Sep 22, 2020, 3:13 PM IST

ದಾವಣಗೆರೆ: ಭಾರೀ‌‌ ಮಳೆ ಹಾಗೂ ಬೆಳೆ ನಾಶವಾದ ಕಾರಣ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಧಾರಣೆ ಹೆಚ್ಚಾಗುತ್ತಿದ್ದರೂ ಸ್ಥಳೀಯ ರೈತರಿಗೆ ಬೆಲೆ‌ ಸಿಗುತ್ತಿಲ್ಲ. ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಭಾರೀ‌‌ ಮಳೆಯಿಂದ ಈರುಳ್ಳಿ ಬೆಳೆ ನಾಶ: ಕಂಗಾಲಾದ ರೈತರು

ಬೆಂಗಳೂರು ಹಾಗೂ ಹುಬ್ಬಳ್ಳಿ ಹೊರತುಪಡಿಸಿದರೆ ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿರುವ ಈರುಳ್ಳಿ ಎಪಿಎಂಸಿ‌‌ ಮಾರುಕಟ್ಟೆ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು. ಹಾವೇರಿ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ರೈತರು ಈ‌‌ ಮಾರುಕಟ್ಟೆಗೆ ಮಾರಾಟ ಮಾಡಲು ಈರುಳ್ಳಿ ತರುತ್ತಾರೆ. ಈಗ ಸ್ಥಳೀಯ ಈರುಳ್ಳಿಗೆ ಪ್ರತೀ ಕೆಜಿಗೆ 20ರಿಂದ 30 ರೂಪಾಯಿ ಇದ್ದರೆ, ಮಹಾರಾಷ್ಟ್ರದ ನಾಸಿಕ್​ನಿಂದ ಬರುವ ಈರುಳ್ಳಿಗೆ ಪ್ರತೀ ಕೆಜಿಗೆ 48ರಿಂದ 50 ರೂಪಾಯಿ ಧಾರಣೆ ಇದೆ.

ನಿರಂತರ ಮಳೆಯಿಂದ ಜಮೀನಿನಲ್ಲಿ‌‌ ನೀರು ನಿಂತಿರುವ ಕಾರಣ ಹಾಗೂ ಇಳುವರಿ ಕುಂಠಿತವಾಗಿರುವುದರಿಂದ ಒಂದು ಎಕರೆಯಲ್ಲಿ‌ ಕೇವಲ ಶೇ. 30ರಿಂದ 40ರಷ್ಟು ಬೆಳೆ ಬಂದಿದೆ. ಉಳಿದೆಲ್ಲಾ ಬೆಳೆ ಹಾಳಾಗಿದೆ. ಸಾಲ ಮಾಡಿ ಬೆಳೆದಿದ್ದ ಈರುಳ್ಳಿ‌ ಬೆಳೆಗಾರರಿಗೆ ಅಸಲು ಸಹ ಸಿಗುತ್ತಿಲ್ಲ. ಮಾಡಿದ ಸಾಲ ಹೇಗೆ ಮರುಪಾವತಿ ಮಾಡಬೇಕೆಂದು ಚಿಂತಾಕ್ರಾಂತರಾಗಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಬೆಂಬಲ ಬೆಲೆ ನೀಡಬೇಕು. ಈಗ‌ ನೀಡುತ್ತಿರುವ ಸಹಾಯಧನ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details