ದಾವಣಗೆರೆ: ಮೇಯರ್ ಗದ್ದುಗೆ ಹಿಡಿಯಲು ಬಿಜೆಪಿಯವರು ಅಡ್ಡದಾರಿ ಹಿಡಿದಿದ್ದಾರೆ. ಸ್ಥಳೀಯರಲ್ಲದ ಎಂಎಲ್‌ಸಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮತ್ತೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಸೇರ್ಪಡೆಗೆ ಅಗತ್ಯ ಕಾನೂನು ಕ್ರಮ ಅನುಸರಿಸುತ್ತಿಲ್ಲ. ತರಾತುರಿಯಲ್ಲಿ ದಾವಣಗೆರೆ ಮತದಾರರ ಪಟ್ಟಿಯಲ್ಲಿ ಸ್ಥಳೀಯರಲ್ಲದವರನ್ನು ಸೇರ್ಪಡೆ ಮಾಡಿದ್ದಾರೆ. ಅನ್ಲೈನ್ ಮೂಲಕ ಸಚಿವ ಆರ್.ಶಂಕರ್ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ದಾವಣಗೆರೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಆರ್.ಶಂಕರ್ ಹೆಸರು ಇಲ್ಲ ಎಂದು ಆರೋಪಿಸಿದ್ದಾರೆ.