ದಾವಣಗೆರೆ : ಕಳೆದ ಮೇಯರ್ ಚುನಾವಣೆಯ ವೇಳೆ ಮತದಾರರ ಪಟ್ಟಿಯಲ್ಲಿದ್ದ ಎಂಎಲ್‌ಸಿಗಳೇ ಈಗಲೂ ಇದ್ದಾರೆ. ಕಾಂಗ್ರೆಸ್ ಪಕ್ಷದ ಎಂಎಲ್‌ಸಿಗಳೂ ದಾವಣಗೆರೆ ಮತದಾರರ ಪಟ್ಟಿಯಲ್ಲಿ ಇದ್ದಾರೆ ಎಂದು ಪಾಲಿಕೆ ಮೇಯರ್ ಅಜಯ್ ಕುಮಾರ್ ಹೇಳಿದರು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಾತನಾಡಿದ ಅವರು, ಎಂಎಲ್‌ಸಿ ಚಿದಾನಂದಗೌಡರು ಚುನಾವಣೆಗೂ ಮೊದಲೇ ದಾವಣಗೆರೆಯಲ್ಲಿ ಮನೆ ಮಾಡುತ್ತೇನೆ ಎಂದು ಹೇಳಿದ್ದರು, ಅವರು ಮಾತಿನಂತೆ ನಡೆದುಕೊಂಡಿದ್ದಾರೆ. ಸಚಿವ ಆರ್. ಶಂಕರ್ ಕೂಡ ದಾವಣಗೆರೆಯಲ್ಲಿ ಮನೆ ಮಾಡಿದ್ದಾರೆ. ಮನೆ ಮಾಡುವ ಮುನ್ನ ಹೋಮ ಹವನ ನಡೆಸಿದ ಫೋಟೋಗಳ ಸಾಕ್ಷಿ ಇದೆ. ಕಾಂಗ್ರೆಸ್ನವರು ಹೇಳುವ ಹಾಗೆ ಮತದಾರರ ಪಟ್ಟಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಬೇರ್ಪಡೆ ಚುನಾವಣೆ ಆಯೋಗದ ಅಧಿಕಾರಿಗಳಿಗೆ ಬಿಟ್ಟಿದ್ದು, ಇದರಲ್ಲಿ ಪಾಲಿಕೆ ಅಥವಾ ಬಿಜೆಪಿಯವರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.