ಕರ್ನಾಟಕ

karnataka

ETV Bharat / state

ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್​​​ಗೆ  ದಾವಣಗೆರೆ ಜಿತೇಂದ್ರ ಆಯ್ಕೆ - Davangere Jitendra

ಉತ್ತರಖಂಡದ ಹರಿದ್ವಾರದಲ್ಲಿ ನಡೆಯಲಿರುವ ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್​​ಗೆ ದಾವಣಗೆರೆ ಜಿಲ್ಲೆಯ ತೋಳಹುಣಸೆ ಗ್ರಾಮದ ಯುವಕ ಜಿತೇಂದ್ರ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾನೆ.

Kabaddi athlete Jitendra from Davangere district
ದಾವಣಗೆರೆ ಜಿಲ್ಲೆಯ ಕಬಡ್ಡಿ ಕ್ರೀಡಾಪಟು ಜಿತೇಂದ್ರ

By

Published : Nov 16, 2022, 7:43 PM IST

ದಾವಣಗೆರೆ:ಜಿಲ್ಲೆಯಲ್ಲಿ ದೇಸಿ ಆಟಕಬಡ್ಡಿಗೆ ಯುವಜನರು ಫಿದಾ ಆಗಿದ್ದು, ಈ ಕ್ರೀಡೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ. ಕಬಡ್ಡಿ ಲೀಗ್​ ಬಂದ ಬಳಿಕ ಈ ದೇಸಿ ಕ್ರೀಡೆಗೆ ಉತ್ತೇಜನ ಸಿಕ್ಕಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಕಬ್ಬಡಿ ಬಾಲಕರು, ಯುವಜನರಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ.

ಜೂನಿಯರ್ ನ್ಯಾಷನಲ್ ಕಬ್ಬಡಿ ಚಾಂಪಿಯನ್ ಶಿಪ್:ಜಿಲ್ಲೆಯ ಗ್ರಾಮೀಣ ಪ್ರತಿಭೆ ಯುವಕನೊಬ್ಬನು ಉತ್ತರಖಂಡದ ರಾಜ್ಯದ ಹರಿದ್ವಾರದಲ್ಲಿ ನಡೆಯಲಿರುವ ಜೂನಿಯರ್ ನ್ಯಾಷನಲ್ ಕಬ್ಬಡಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯದ ತಂಡಕ್ಕೆ ಆಯ್ಕೆಯಾಗಿದ್ದಾನೆ. ಈ ತಿಂಗಳು ನವೆಂಬರ್ 17 ರಿಂದ 20 ರ ರವರೆಗೆ ಚಾಂಪಿಯನ್ ಶಿಪ್ ನಡೆಯಲಿದೆ. 48 ನೇ ಬಾಲಕರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯಿಂದ ತೋಳಹುಣಸೆ ಗ್ರಾಮದ ಜಿತೇಂದ್ರ ಆಯ್ಕೆಯಾಗಿದ್ದು, ಗ್ರಾಮೀಣ ಪ್ರತಿಭೆಗಳಲ್ಲಿ ಮತ್ತಷ್ಟು ಸ್ಪೂರ್ತಿ ತುಂಬಿದೆ.

ಅಮೆಚೂರ್ ಕಬ್ಬಡಿ ಸಂಸ್ಥೆ: ಜಿಲ್ಲೆಯ ಗ್ರಾಮೀಣ ಪ್ರತಿಭೆ ನ್ಯಾಷನಲ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುವುದಕ್ಕೆ ದಾವಣಗೆರೆ ಜಿಲ್ಲೆಯ ಅಮೆಚೂರ್ ಕಬ್ಬಡಿ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಜಂಟಿ ಅಮೆಚೂರ್ ಕಬ್ಬಡಿ ಸಸ್ಥೆಯ ಜಂಟಿ ಕಾರ್ಯದರ್ಶಿ ನಾಗಾರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಡ ಕುಟುಂಬದಲ್ಲಿ ಬೆಳೆದ ಜಿತೇಂದ್ರ:ತೋಳಹುಣಸೆ ಗ್ರಾಮದ ಜಿತೇಂದ್ರರವರು ಕಬಡ್ಡಿ ಕ್ರೀಡೆಯಲ್ಲಿ ಸಾಕಷ್ಟು ಪಳಗಿದ್ದಾರೆ. ಕಬಡ್ಡಿ ನಾನಾ ಕೌಶಲ ಕರಗತ ಮಾಡಿಕೊಂಡ ಜಿತೇಂದ್ರ ಸಾಕಷ್ಟು ಟೂರ್ನಿಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿದ್ದಾರೆ. ಜಿಲ್ಲೆ, ರಾಜ್ಯ, ಮಟ್ಟದಲ್ಲಿ ಮಿಂಚಿರುವ ಜಿತೇಂದ್ರ ಇದೀಗ ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುವುದು ಇಡೀ ದಾವಣಗೆರೆ ಜಿಲ್ಲೆಯ ಕೀರ್ತಿ ತಂದಿದ್ದಾನೆ.

ಇದನ್ನೂಓದಿ:ಏಷ್ಯನ್ ಏರ್‌ಗನ್ ಚಾಂಪಿಯನ್‌ ಶಿಪ್‌: ಚಿನ್ನದ ಪದಕ ಗೆದ್ದ ಕನ್ನಡದ ಕುವರಿ

ABOUT THE AUTHOR

...view details