ದಾವಣಗೆರೆ:ಮುಳ್ಳುಗದ್ದುಗೆ ಉತ್ಸವದ ವೇಳೆ ಸ್ವಾಮೀಜಿಯೊಬ್ಬರು ಅದೇ ಮುಳ್ಳುಗದ್ದುಗೆಯ ಮೇಲೆ ಕುಣಿದಿರುವುದು ಅಚ್ಚರಿಗೆ ಕಾರಣವಾಯಿತು.
ರಾಮಲಿಂಗೇಶ್ವರ ದೇವಸ್ಥಾನದ ಜಾತ್ರೆಯ ವೇಳೆ ಮುಳ್ಳುಗದ್ದುಗೆಯ ಮೇಲೆ ಕುಣಿದ ಸ್ವಾಮೀಜಿಯನ್ನು ಕಂಡ ಭಕ್ತರು ಇದು ಭಕ್ತಿಯ ಪರಾಕಾಷ್ಠೆಯೋ, ದೇವರ ಲೀಲೆಯೋ ಎನ್ನುತ್ತಿದ್ದರು. ಪ್ರತಿ ವರ್ಷ ಶಿವರಾತ್ರಿ ಸಮಯದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರದಲ್ಲಿ ಮುಳ್ಳುಗದ್ದುಗೆ ಜಾತ್ರೆ ನಡೆಯುತ್ತದೆ.