ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಸೋಮವಾರ 228 ಕೊರೊನಾ ಸೋಂಕಿತರು ಗುಣಮುಖ : 114 ಮಂದಿಗೆ ಪಾಸಿಟಿವ್ - ದಾವಣಗೆರೆ ಕೋವಿಡ್​ ಅಪ್ಡೆಟ್​

ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರ 114 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,568 ಆಗಿದೆ.

Davangere District Covid Update
ದಾವಣಗೆರೆ ಕೋವಿಡ್​ ಪ್ರಕರಣ

By

Published : Oct 12, 2020, 10:40 PM IST

ದಾವಣಗೆರೆ : ಜಿಲ್ಲೆಯಲ್ಲಿ ಸೋಮವಾರ 228 ಜನರು‌ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 16,869 ಆಗಿದೆ.

ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ 65 ವರ್ಷದ ವೃದ್ದೆ ಹಾಗೂ ಹರಿಹರ ತಾಲೂಕಿನ ಕುಂಬಳೂರು ಗ್ರಾಮದ 80 ವರ್ಷದ ವೃದ್ಧ ಸೋಮವಾರ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 249 ಕ್ಕೇರಿದೆ.

ಸೋಮವಾರ ದಾವಣಗೆರೆಯಲ್ಲಿ 46, ಹರಿಹರ 24, ಜಗಳೂರು 12, ಚನ್ನಗಿರಿ 15 ಹಾಗೂ ಹೊನ್ನಾಳಿಯಲ್ಲಿ 17 ಪ್ರಕರಣಗಳು ಸೇರಿ ಒಟ್ಟು 114 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 18,568 ಆಗಿದೆ. ಪ್ರಸ್ತುತ 1,450 ಸಕ್ರಿಯ ಪ್ರಕರಣಗಳಿವೆ. ಸೋಮವಾರ 1,070 ಜನರ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು,7,088 ಜನರ ವರದಿ ಬರಬೇಕಿದೆ.

ABOUT THE AUTHOR

...view details