ದಾವಣಗೆರೆ:ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯು ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಸತತ ಮೂರನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ದಾವಣಗೆರೆ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷ ನುಡಿದಂತೆ ನಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ: ರಾಘವೇಂದ್ರ - ದಾವಣಗೆರೆ ಸುದ್ದಿ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯು ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಸತತ ಮೂರನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ದಾವಣಗೆರೆ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಘವೇಂದ್ರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕತೆಯ,ಜನಪರ ಕೆಲಸವನ್ನು ನೋಡಿ ದೆಹಲಿಯ ಮತದಾರ ಅವರನ್ನ ಮತ್ತೆ ಆರಿಸಿ ಜನಸೇವೆ ಮಾಡಲೆಂದು ಅವಕಾಶ ಕೊಟ್ಟಿದ್ದಾರೆ. ಇದು ಆಮ್ ಆದ್ಮಿ ಪಾರ್ಟಿಯ ಗೆಲುವುವಲ್ಲ,ಇದು ದೆಹಲಿ ಮತದಾರರ ಗೆಲುವು. ಆಮ್ ಆದ್ಮಿ ಪಕ್ಷ ನುಡಿದಂತೆ ನಡೆದು ಕಾಯಾ,ವಾಚ,ಮನಸಾ ದೆಹಲಿ ಜನತೆ ಹಿತದೃಷ್ಠಿಗಾಗಿ ಹಗಲಿರುಳಿ ಶ್ರಮಪಟ್ಟು ಕೆಲಸ ನಿರ್ವಹಿಸಿದೆ.
ಕೇಜ್ರಿವಾಲ್ ಇಡೀ ದೇಶದಲ್ಲಿಯೇ ದೆಹಲಿ ರಾಜ್ಯವನ್ನು ಶಿಕ್ಷಣದಲ್ಲಿ ಆರೋಗ್ಯದಲ್ಲಿ ಹಾಗೂ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿ ಮಾದರಿಯಾಗಿದ್ದಾರೆ ಎಂದರು.