ದಾವಣಗೆರೆ:ಸಿಟಿ ಸ್ಕ್ಯಾನ್ಗೆ ಜನರಿಂದ ಹೆಚ್ಚು ಹಣ ಪೀಕುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಅಧಿಕಾರಿಗಳು ನಗರದ ಖಾಸಗಿ ಮೆಡಿಕಲ್ ಸೆಂಟರ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಗಡೆ ಡಯಾಗ್ನಸ್ಟಿಕ್ ಸೆಂಟರ್ಗೆ ಭೇಟಿ ನೀಡಿ ಸಿಟಿ ಸ್ಕ್ಯಾನ್ ಬಗ್ಗೆ ಪರಿಶೀಲನೆ ನಡೆಸಿದರು. ರೋಗಿಗಳು ಮತ್ತವರ ಸಂಬಂಧಿಕರೊಂದಿಗೆ ಮಾತನಾಡಿ, ನಿಗದಿತ ದರ ಪಡೆಯುತ್ತಿದ್ದಾರೆಯೇ ಎಂದು ವಿಚಾರಿಸಿದರು. ಅಲ್ಲದೆ, ಸರ್ಕಾರದ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಹಣ ಪಡೆಯದಂತೆ ಮೆಡಿಕಲ್ ಸೆಂಟರ್ ಮುಖ್ಯಸ್ಥರಿಗೆ ಸೂಚನೆ ನೀಡಿದರು.