ದಾವಣಗೆರೆ :ತಾಲೂಕಿನ ಸರ್ಕಾರಿ ಶಾಲೆಯ ಶ್ರಮಿಕರ ಮಕ್ಕಳಿಗೆ ಸುಮಾರು 3,500 ಪುಸ್ತಕ ಹಾಗೂ ಸಾವಿರ ಪೆನ್ನು, ಪೆನ್ಸಿಲ್ ನೀಡಿ ದಾವಣಗೆರೆ ಪಾಲಿಕೆಯ ಮೇಯರ್ ಮಾನವೀಯತೆ ಮೆರೆದ್ದಾರೆ.
ಶ್ರಮಿಕರ ಮಕ್ಕಳಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮೇಯರ್ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ ವೀರೇಶ್ ಅವರು ಒಂದು ವರ್ಷದ ಹಿಂದೆ ಮೇಯರ್ ಆಗುವ ಮುನ್ನ ಶಾಲು, ಹಾರ ತುರಾಯಿ ತರದಂತೆ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಮನವಿ ಮಾಡಿದ್ದರು. ಹಾರ, ತುರಾಯಿ ಬದಲಿಗೆ ಶಾಲಾ ಮಕ್ಕಳ ಕಲಿಕೆಗೆ ಅವಶ್ಯಕವಾಗಿರುವ ವಸ್ತುಗಳನ್ನು ತಂದು ಕೊಡುವಂತೆ ಅವರು ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಮೇಯರ್ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಮಕ್ಕಳಿ ಕಲಿಕೆಗೆ ಬೇಕಾಗುವ ಪೆನ್ನು, ಪುಸ್ತಕ ಹಾಗೂ ಸ್ವಾಮಿ ವಿವೇಕಾನಂದ ಅವರ ಪುಸ್ತಕಗಳನ್ನು ನೀಡಿದ್ದರು. ಈ ಎಲ್ಲಾ ವಸ್ತುಗಳನ್ನು ಮೇಯರ್ ಎಸ್.ಟಿ ವೀರೇಶ್ ಅವರು ದಾವಣಗೆರೆ ಹೊರವಲಯದ ಶ್ರೀರಾಮ್ ಬಡಾವಣೆಯಲ್ಲಿರುವ ಸರ್ಕಾರಿ ಶಾಲೆಯ ಶ್ರಮಿಕರ ಮಕ್ಕಳಿಗೆ ವಿತರಿಸಿದ್ದಾರೆ.
ಇದನ್ನೂ ಓದಿ:ಕೃಷಿ ಸಚಿವರಾಗಿ ಎರಡು ವರ್ಷ: ಅನ್ನದಾತರೊಂದಿಗೆ ಬಿಸಿ ಪಾಟೀಲ್ ಅಂತರಾಳದ ಮಾತು
3500 ಪುಸ್ತಕ, ಸಾವಿರ ಪೆನ್ನು, ಪೆನ್ಸಿಲ್, ಹಾಗೂ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ರಾಮ್ ನಗರದ ಶಾಲೆಯಲ್ಲಿರುವ ಒಟ್ಟು 195 ಮಕ್ಕಳಿಗೆ ವಿತರಿಸಿದ್ದಾರೆ. ಎಲ್ಲಾ ಮಕ್ಕಳಿಗೂ ನಾಲ್ಕು ಪುಸ್ತಕ ಹಾಗೂ ಪೆನ್ನು ಪೆನ್ಸಿಲ್‌ಗಳನ್ನು ಶಾಲೆಯ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.