ದಾವಣಗೆರೆ: ಜಿಲ್ಲೆಯ ಚನ್ನಗಿರಿ ಹಾಗೂ ಜಗಳೂರು ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಝೋನ್ಗಳಿಗೆ ಸಿಇಒ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾವಣಗೆರೆ : ಕಂಟೇನ್ಮೆಂಟ್ ಝೋನ್ಗಳಿಗೆ ಸಿಇಒ ಭೇಟಿ, ಪರಿಶೀಲನೆ - Davangere containment zones
ಗ್ರಾಮೀಣ ಭಾಗದ ಕೋವಿಡ್-19 ಕಂಟೇನ್ಮೆಂಟ್ ಝೋನ್‍ಗಳಲ್ಲಿನ ಮನೆಗಳ ಯಾವ ವ್ಯಕ್ತಿಗಳೂ ಹೊರಗೆ ಬಾರದಂತೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ. ಈ ವಲಯದಲ್ಲಿ ಇರುವ ಜನರಿಗೆ ಅಗತ್ಯ ವಸ್ತುಗಳು ಮತ್ತು ಜಾನುವಾರುಗಳಿಗೆ ಮೇವು ಸರಬರಾಜು ಮಾಡುವಂತೆ ಸಂಬಂಧಿಸಿದ ಪಿಡಿಓಗಳಿಗೆ ಸಿಇಒ ಸೂಚನೆ ನೀಡಿದರು.
ಕಂಟೇನ್ಮೆಂಟ್ ಝೋನ್ಗಳಿಗೆ ಸಿಇಒ ಭೇಟಿ
ಚನ್ನಗಿರಿ ತಾಲೂಕಿನ ಮೆದಿಕೆರೆ, ಸಂತೆಬೆನ್ನೂರು, ದಿಗ್ಗಿಹಳ್ಳಿ, ರಾಜಗೊಂಡನಹಳ್ಳಿ ತಾಂಡಾ, ಪಾಂಡೋಮಟ್ಟಿ, ತಾವರಕೆರೆ, ಹಿರೇಕೋಗಲೂರು ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.