ದಾವಣಗೆರೆ:ಆಂಜನೇಯ ಸ್ವಾಮಿ ದೇವಸ್ಥಾನದ ಗಂಟೆ ಕಳವು ಆಗಿರುವ ಘಟನೆ ಹದಡಿ ಗ್ರಾಮದಲ್ಲಿ ನಡೆದಿದೆ.
ಆಂಜನೇಯ ಸ್ವಾಮಿ ದೇವಸ್ಥಾನದ ನ್ಯಾಯದ ಗಂಟೆಯೇ ಕಳವು! ಎಲ್ಲಿದೆ ನ್ಯಾಯ? - ದಾವಣಗೆರೆ ಘಂಟೆ ಕಳವು ಸುದ್ದಿ ಸುದ್ದಿ
ದಾವಣಗೆರೆ ಆಂಜನೇಯ ಸ್ವಾಮಿ ದೇವಸ್ಥಾನದ ಗಂಟೆ ಕಳವು ಆಗಿರುವ ಘಟನೆ ಹದಡಿ ಗ್ರಾಮದಲ್ಲಿ ನಡೆದಿದೆ.
ಆಂಜನೇಯ ಸ್ವಾಮಿ ದೇವಸ್ಥಾನ
ರಾತ್ರಿ ಪೂಜೆ ಮಾಡಿ ದೇವಸ್ಥಾನಕ್ಕೆ ಬೀಗ ಹಾಕಿ ಹೋಗಿದ್ದ ಪುರೋಹಿತರು ಬೆಳಗ್ಗೆ ಬಂದು ನೋಡಿದಾಗ ಗಂಟೆ ಇಲ್ಲದ್ದನ್ನು ಗಮನಿಸಿದ್ದಾರೆ. ಸುಮಾರು 70 ಕೆಜಿ ತೂಕದ ಗಂಟೆ ಇದಾಗಿದ್ದು, ಗ್ರಾಮದಲ್ಲಿ ಇದೇ ಗಂಟೆ ಬಡಿದು ಭಕ್ತರು ಪ್ರಮಾಣ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನು ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.