ದಾವಣಗೆರೆ:ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಘೋಷಣೆ ಮಾಡಿದ್ರು, ಅದ್ರೇ ಅಧಿಕಾರಕ್ಕೇರಿ ತಿಂಗಳು ಕಳಿತಾ ಬಂದ್ರು ಕೂಡ ಜನ್ರಿಗೆ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ಮಾತ್ರ ದೊರಕ್ಕಿಲ್ಲ, ಬದಲಾಗಿ ಪ್ರತಿ ತಿಂಗಳು ಬರ್ತಿದ್ದಾ ವಿದ್ಯುತ್ ಬಿಲ್ ಈ ಬಾರಿ ಜನರಿಗೆ ಶಾಕ್ ನೀಡಿದೆ, ಕಡಿಮೆ ವಿದ್ಯುತ್ ಬಿಲ್ನ ಮೊತ್ತ ದುಪ್ಪಟ್ಟು ಹೋಗಿ ಮೂರು ಪಟ್ಟಾಗಿದ್ದರಿಂದ ಗ್ರಾಮೀಣ ಭಾಗದ ಜನ್ರು ಹೈರಾಣಾಗಿದ್ದಾರೆ.
ಹೌದು, ರೈತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ 200 ಯೂನಿಟ್ ಉಚಿತ ವಿದ್ಯುತ್ ಸಿಗುತ್ತೇಂದು ಸಾಕಷ್ಟು ಆಸೆ ಇಟ್ಟುಕೊಂಡಿದ್ದರು, ದುರಂತ ಅಂದರೆ ಅ ಇಡೀ ಗ್ರಾಮದಲ್ಲಿ ವಿದ್ಯುತ್ ಬಿಲ್ ದುಪ್ಪಟ್ಟು ಅಲ್ಲದೆ ಮೂರು ಪಟ್ಟು ಹೆಚ್ಚಾಗಿದೆ. ಅದೆಲ್ಲಿ ಅಂತೀರ ದಾವಣಗೆರೆ ತಾಲೂಕಿನ ಹಳೇಬಾತಿ ಗ್ರಾಮದಲ್ಲಿ. ಪ್ರತಿಯೊಂದು ಮನೆಗೆ ಬಂದಿರುವ ಬಿಲ್ ಜನರಿಗೆ ಗೊಂದಲ ಮೂಡಿಸಿದೆ. ಪ್ರತಿ ತಿಂಗಳು ಬರುತ್ತಿದ್ದ ವಿದ್ಯುತ್ ಬಿಲ್ನ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ತ್ರಿಗುಣ ಏರಿಕೆ ಕಂಡಿದೆ. ಐದು ನೂರು ಬರುವ ಬಿಲ್ ಮೊತ್ತ ಇದ್ದಕ್ಕಿದ್ದಂತೆ ಎರಡು ಸಾವಿರ ಮೂರು ಸಾವಿರ ಬಂದಿರುವುದು ಇಡೀ ಬಾತಿ ಗ್ರಾಮಸ್ಥರನ್ನು ದಂಗಾಗಿಸಿದೆ.
ಈ ಗ್ರಾಮದ ಡಿಜಿ ಹನುಮಂತಪ್ಪ ಎಂಬುವರ ಮನೆಯ ಹಳೇಯ ವಿದ್ಯುತ್ ಬಿಲ್ ಐದು ನೂರು ಚಿಲ್ಲರೆ ಹಣವನ್ನು ನಮೂದಿಸಲಾಗಿತ್ತು, ಅದರೆ ಇದೀಗ ಬೆಸ್ಕಾಂ ನೀಡಿರುವ ಹೊಸ ಬಿಲ್ ನಲ್ಲಿ 1,944 ರೂಪಾಯಿ ಬಂದಿರುವುದ್ದರಿಂದ ಇಡೀ ಮನೆಯವರು ದಂಗಾಗಿದ್ದಾರೆ. ಆದರೆ ಈ ವಿದ್ಯುತ್ ಬಿಲ್‌ಗಳಲ್ಲಿ ಇತರೆ ಮೊತ್ತ ಹೆಚ್ಚು ನಮೂದಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಪ್ರತಿ ಮನೆಯ ವಿದ್ಯುತ್ ಬಿಲ್‌ಗಳಲ್ಲಿ ಇತರೆ ಎಂಬ ಪದ ಬಳಕೆ ಮಾಡಿ ಹೆಚ್ಚು ಹಣವನ್ನು ನಮೂದಿಸಿರುವುದು ರೈತರು ಬೆಸ್ಕಾಂ ವಿರುದ್ಧ ಹಿಡಿ ಶಾಪ ಹಾಕುವಂತೆ ಮಾಡಿದೆ.
ಈ ವೇಳೆ ಪ್ರತಿಕ್ರಿಯಿಸಿದ ಸಿದ್ದೇಶ್ ಎಂಬುವರು ಪ್ರತಿ ಬಾರಿ ಕಡಿಮೆ ಬಿಲ್ ಬರುತ್ತಿತ್ತು, ಇದೀಗ ಹೆಚ್ಚು ಬಂದಿದೆ. ಹಳೇ ಬಿಲ್ ಗಳಲ್ಲಿ ಒಂದು ಯೂನಿಟ್ ಗೆ 4.20 ಇತ್ತು, ಹೊಸ ಬಿಲ್ ನಲ್ಲಿಲ್ಲಿ ಒಂದು ಯೂನಿಟ್ ಗೆ 07 ರೂಪಾಯಿಗೆ ಏರಿಸಿರುವುದು ಬಡವರು ಬಗ್ಗರಿಗೆ ದಿಕ್ಕು ತೋಚದಂತಾಗಿದೆ. ಇನ್ನು ಪ್ರತಿಯೊಂದು ಬಿಲ್ ಗಳಲ್ಲಿ ಇತರೆ ಎಂದು ಹಣ ನಮೂದಿಸಿ ಹೆಚ್ಚು ಬಿಲ್ ನೀಡಿದೆ. ತಕ್ಷಣ ಸಿಎಂ ಸಿದ್ದರಾಮಯ್ಯನವರು, ಇಂಧನ ಸಚಿವ ಜಾರ್ಜ್ ಅವರು ಇದರ ಬಗ್ಗೆ ಪರಿಶೀಲನೆ ನಡೆಸಿ ಇತರೆ ಮೊತ್ತ ಏನು ಎಂಬುದರ ಬಗ್ಗೆ ಎಂದು ಸ್ಪಷ್ಟನೆ ನೀಡಬೇಕು ಎಂದು ಕೇಳಿಕೊಂಡರು.