ಕರ್ನಾಟಕ

karnataka

ETV Bharat / state

ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿ: ದಾವಣಗೆರೆ ವಿವಿಯ 7 ಮಂದಿಗೆ ಸ್ಥಾನ - ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿ ಬಿಡುಗಡೆ

ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿವಿ ಬಿಡುಗಡೆಗೊಳಿಸಿದ ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿವಿಯ ಮೂವರು ಪ್ರಾಧ್ಯಾಪಕರು, ನಾಲ್ವರು ಸಂಶೋಧನಾ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

seven people in the list of scientists
ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಿವಿ ಏಳು ಜನರಿಗೆ ಸ್ಥಾನ

By ETV Bharat Karnataka Team

Published : Oct 6, 2023, 10:05 PM IST

Updated : Oct 6, 2023, 10:59 PM IST

ಪ್ರೊ.ಮಹಾಬಲೇಶ್ವರ್ ಈಟಿವಿ ಭಾರತ್​ದೊಂದಿಗೆ ಮಾತನಾಡಿದರು.

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ವಿಶ್ವ ವಿಜ್ಞಾನಿಗಳ ಸ್ಥಾನದಲ್ಲಿ ಗುರುತಿಸಿಕೊಂಡು ವಿವಿಯ ಕೀರ್ತಿಯನ್ನು ಜಗದಗಲ ಹಬ್ಬಿಸಿದ್ದಾರೆ. ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿವಿಯು ಅಕ್ಟೋಬರ್ 5 ರಂದು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ದಾವಣಗೆರೆ ವಿವಿ ಮೂವರು ಪ್ರಾಧ್ಯಾಪಕರು, ನಾಲ್ವರು ವಿದ್ಯಾರ್ಥಿಗಳು ಸೇರಿ ಏಳು ಮಂದಿ ಸ್ಥಾನ ಸಿಕ್ಕಿದೆ. ವಿವಿಯ ಮೂವರು ಪ್ರಾಧ್ಯಾಪಕರು 2ನೇ ಬಾರಿಗೆ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವುದು ಪ್ರಾಧ್ಯಾಪಕರ ಬಳಗ, ವಿದ್ಯಾರ್ಥಿಗಳಲ್ಲಿ ಹರ್ಷ ಮೂಡಿಸಿದೆ.

ಗಣಿತಶಾಸ್ತ್ರ ವಿಭಾಗದ ಸಾಧನೆ:ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಮಹಾಬಲೇಶ್ವರ್, ಪ್ರೊ.ಪ್ರಸನ್ನ ಕುಮಾರ್, ಪ್ರೊ.ಡಿ.ಜಿ.ಪ್ರಕಾಶ್ ಸೇರಿದಂತೆ ಅವರ ವಿದ್ಯಾರ್ಥಿಗಳಾದ ಡಾ.ಮದುಖೇಶ್, ಡಾ.ವರುಣ್, ಡಾ.ಪುನೀತ್, ಡಾ.ನವೀನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಂತರರಾಷ್ಟ್ರೀಯ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಉಲ್ಲೇಖಗಳನ್ನು ಒಳಗೊಂಡ ಹೆ-ಇಂಡೆಕ್ಸ್, ಐ ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಯಾರಿಗೆ ಯಾವ ರ್ಯಾಂಕ್​?: ಸ್ಟ್ಯಾನ್ ಫೋರ್ಡ್‌ ವಿವಿಯ ಪಟ್ಟಿಯಲ್ಲಿ ಗಣಿತಶಾಸ್ತ್ರ ವಿಭಾಗದ ಬಿ.ಸಿ.ಪ್ರಸನ್ನ ಕುಮಾರ್ ಮುಂಚೂಣಿಯಲ್ಲಿದ್ದಾರೆ. ಇದಲ್ಲದೇ ಇವರು ವಿಶ್ವಮಾನವ ಸಾಧನೆಯ ಶ್ರೇಯಾಂಕದಲ್ಲಿ ಪ್ರಸನ್ನಕುಮಾರ್ ಸ್ಥಾನ ದಕ್ಕಿಸಿಕೊಂಡಿದ್ದಾರೆ. ಇದಲ್ಲದೇ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್​ನಲ್ಲೂ ಇವರ ಹೆಸರಿದೆ.

ಪ್ರೊ.ಬಿ.ಸಿ.ಪ್ರಸನ್ನ ಕುಮಾರ್ ಹಾಗೂ ಪ್ರೊ.ಪ್ರಕಾಶ್, ಪ್ರೊ.ಮಹಾಬಲೇಶ್ವರ್ ಸೇರಿದಂತೆ ಡಾ.ನವೀನ್, ಡಾ‌.ಪುನೀತ್ ಗೌಡ ಸೇರಿ ಒಟ್ಟು ಐವರು 2ನೇ ಬಾರಿ ಸ್ಟ್ಯಾನ್‌ಫೋರ್ಡ್‌ ವಿವಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಸಂಶೋಧನಾ ವಿದ್ಯಾರ್ಥಿ ಡಾ.ಮದುಖೇಶ್ ಜೆ.ಕೆ., ಡಾ.ವರುಣ್ ಕುಮಾರ್ ಈ ಬಾರಿ ಹೊಸದಾಗಿ ಪಟ್ಟಿಯಲ್ಲಿ ಸ್ಥಾನ ದಕ್ಕಿಸಿಕೊಂಡಿದ್ದಾರೆ.

ಪ್ರೊ.ಬಿ.ಸಿ.ಪ್ರಸನ್ನ ಕುಮಾರ್- 9576 ರ್ಯಾಂಕ್, ಪ್ರೊ.ಮಹಾಬಲೇಶ್ವರ್- 197533 ರ್ಯಾಂಕ್, ಪ್ರೊ.ಪ್ರಕಾಶ್- 143850 ರ್ಯಾಂಕ್ ಪಡೆದಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಾದ ಡಾ.ಪುನೀತ್ ಗೌಡ - 45450 ರ್ಯಾಂಕ್, ಡಾ.ನವೀನ್ ಕುಮಾರ್ ಆರ್-65146 ರ್ಯಾಂಕ್, ಡಾ.ಮದುಖೇಶ್ ಜೆ.ಕೆ.- 190634, ಡಾ. ವರುಣ್ ಕುಮಾರ್ -199661 ರ್ಯಾಂಕ್ ಪಡೆದಿದ್ದಾರೆ. ಇದಲ್ಲದೇ ಪ್ರೊ.ಬಿ.ಸಿ.ಪ್ರಸನ್ನ ಕುಮಾರ್ ಆಲ್ ಇಂಡಿಯಾ ಸೈಂಟಿಸ್ಟ್ ರ್ಯಾಂಕ್ ಪಟ್ಟಿಯಲ್ಲಿ 78 ರ್ಯಾಂಕ್ ಪಡೆದಿದ್ದಾರೆ.

ಗಣಿತಶಾಸ್ತ್ರ ವಿಭಾಗದ ಪ್ರೊ.ಮಹಾಬಲೇಶ್ವರ್ ಪ್ರತಿಕ್ರಿಯೆ:ಪ್ರೊ.ಮಹಾಬಲೇಶ್ವರ್ ಅವರು ಈಟಿವಿ ಭಾರತ ಜೊತೆ ಮಾತನಾಡಿ, "ಸ್ಟ್ಯಾನ್‌ಫೋರ್ಡ್‌ ವಿವಿಯಿಂದ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದಾವಣಗೆರೆ ವಿವಿಯ ಮೂವರು ಪ್ರಾಧ್ಯಾಪಕರು ಹಾಗೂ ನಾಲ್ವರು ವಿದ್ಯಾರ್ಥಿಗಳು ವಿಶ್ವ ವಿಜ್ಞಾನಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ವಿಶ್ವದ ಟಾಪ್‌ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ನಮ್ಮವರು ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದೆ" ಎಂದರು.

ಸಂಶೋಧನಾ ವಿದ್ಯಾರ್ಥಿ ಡಾ.ಮದುಖೇಶ್ ಜೆ.ಕೆ.ಮಾತನಾಡಿ, "ವಿದ್ಯಾರ್ಥಿಗಳು ಈಗಾಗಲೇ ಅಸಿಸ್ಟೆಂಟ್ ಪ್ರೊಫೆಸರ್‌ಗಳಾಗಿ ಬೇರೆ ಬೇರೆ ಕಡೆ ಕೆಲಸ ಮಾಡ್ತಿದ್ದಾರೆ. ನಾವು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇವೆ. ಅದರಲ್ಲಿ ನಮ್ಮ ವಿದ್ಯಾರ್ಥಿಗಳು ನಮ್ಮೊಂದಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಂತಸ ತಂದಿದೆ" ಎಂದು ತಿಳಿಸಿದರು.

ಸಂಶೋಧನಾ ವಿದ್ಯಾರ್ಥಿ ಡಾ.ಮದುಖೇಶ್ ಜೆ.ಕೆ.ಮಾತನಾಡಿ, "ದಾವಣಗೆರೆ ವಿವಿಯಲ್ಲಿ ಪ್ರಥಮ ಬ್ಯಾಚ್‌ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಖುಷಿ ತಂದಿದೆ. ನನ್ನ ನಾಲ್ವರು ಸ್ನೇಹಿತರು ಹಾಗೂ ಮಾರ್ಗದರ್ಶಿಗಳಾದ ಬಿ.ಸಿ.ಪ್ರಸನ್ನ ಕುಮಾರ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಶ್ವಮಾನವ ಸಾಧನೆಯ ಪಟ್ಟಿಯಲ್ಲಿ ಪ್ರಸನ್ನ ಕುಮಾರ್ ಇರುವುದು ಖುಷಿ ತಂದಿದೆ. ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್​ನಲ್ಲೂ ಅವರ ಹೆಸರು ಇರುವುದು ಸಂತಸ ತಂದಿದೆ" ಎಂದು ಹೇಳಿದರು.

ಶಿವಮೊಗ್ಗದ ಇಬ್ಬರಿಗೆ ಪಟ್ಟಿಯಲ್ಲಿ ಸ್ಥಾನ :ಈ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಡಾ.ಬಿ.ಜೆ.ಗಿರೀಶ್ ಮತ್ತು ಡಾ.ಬಿ.ಇ ಕುಮಾರಸ್ವಾಮಿ ಎಂಬುವರು ಸಹ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಸಹ ಸತತ ಮೂರನೇ ವರ್ಷ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪಟ್ಟಿಯಲ್ಲಿ 40,686ನೇ ಸ್ಥಾನ ಪಡೆದಿರುವ ವಿವಿಯ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಜೆ.ಗಿರೀಶ್ ಇಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳ ಕುರಿತು ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ.ಇ.ಕುಮಾರಸ್ವಾಮಿ 1,79,264ನೇ ಸ್ಥಾನದಲ್ಲಿದ್ದಾರೆ.

ಇದನ್ನೂಓದಿ:ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 3ನೇ ಬಾರಿಗೆ ಕುವೆಂಪು ವಿವಿ ಪ್ರಾಧ್ಯಾಪಕರು

Last Updated : Oct 6, 2023, 10:59 PM IST

ABOUT THE AUTHOR

...view details