ದಾವಣಗೆರೆ; ಈಗಂತೂ ದೇಶದಾದ್ಯಂತ ಟ್ರಾಫಿಕ್ ದಂಡದ್ದೆ ಸುದ್ದಿ, ಇದರಿಂದಾಗಿ ವಾಹನ ಸವಾರರು ಚಿಂತೆಗೀಡಾಗಿರುವುದಂತೂ ಸತ್ಯ .ಈ ಕಾನೂನು-ನಿಯಮಗಳು ಕೇವಲ ಸಾರ್ವಜನಿಕರಿಗೆ ಮಾತ್ರವೆಂಬಂತಿತ್ತು. ಆದ್ರೆ ಇತ್ತ ಜನರಿಗೆ ಮಾತ್ರವಲ್ಲದೇ ಸರ್ಕಾರಿ ವಾಹನಗಳಿಗೂ ದಂಡ ವಿಧಿಸುತ್ತಾರೆ ಎಂಬುದನ್ನ ಇದೀಗ ಟ್ರಾಫಿಕ್ ಪೊಲೀಸರು ಸಾಬೀತು ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸೀಟ್ ಬೆಲ್ಟ್ ಧರಿಸದ ಸರ್ಕಾರಿ ವಾಹನದ ಚಾಲಕನಿಗೂ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು! - 1000 ಸಾವಿರ
ಈಗಂತೂ ದೇಶದಾದ್ಯಂತ ಟ್ರಾಫಿಕ್ ದಂಡದ್ದೆ ಸುದ್ದಿ, ಇದರಿಂದಾಗಿ ವಾಹನ ಸವಾರರು ಚಿಂತೆಗೀಡಾಗಿರುವುದಂತೂ ಸತ್ಯ .ಈ ಕಾನೂನು-ನಿಯಮಗಳು ಕೇವಲ ಸಾರ್ವಜನಿಕರಿಗೆ ಮಾತ್ರವೆಂಬಂತಿತ್ತು, ಆದ್ರೆ ಇತ್ತ ಜನರಿಗೆ ಮಾತ್ರವಲ್ಲದೇ ಸರ್ಕಾರಿ ವಾಹನಗಳಿಗೂ ದಂಡ ವಿಧಿಸುತ್ತಾರೆ ಎಂಬುದನ್ನ ಇದೀಗ ಟ್ರಾಫಿಕ್ ಪೊಲೀಸರು ತೋರಿಸಿಕೊಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಸರ್ಕಾರಿ ವಾಹನದ ಚಾಲಕನಿಗೂ ಬಿತ್ತು ಟ್ರಾಫಿಕ್ ಪೊಲೀಸರ ದಂಡದ ಬಿಸಿ
ನಗರದ ಪಿ ಬಿ ರಸ್ತೆಯಲ್ಲಿ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಸರ್ಕಾರಿ ವಾಹನದ ಚಾಲಕರು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುತ್ತಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಾಹನ ಚಾಲಕ ಸೀಟ್ ಬೆಲ್ಟ್ ಧರಿಸದ ಹಿನ್ನಲೆ 1000 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಇದರಿಂದ ಸಂಚಾರಿ ನಿಯಮ ಪಾಲನೆ ಮಾಡದ ಸರ್ಕಾರಿ ವಾಹನಗಳಿಗೂ ದಂಡ ವಿಧಿಸಿದಂತಾಗಿದ್ದು, ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು ಎಂಬ ಸಂದೇಶ ನೀಡಿದ್ದಾರೆ.