ದಾವಣಗೆರೆ: ಫಿನಾಯಿಲ್ ಸೇರಿ ಇತರೆ ವಾಸನೆಯುಳ್ಳ ದ್ರಾವಣ ಮಾರಾಟ ಮಾಡುವ ನೆಪದಲ್ಲಿ ಸಂಶಯಾಸ್ಪದ, ಅಪರಿಚಿತ ಮಹಿಳೆಯರು ಮನೆ ಅಥವಾ ಓಣಿಗಳಲ್ಲಿ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಸರಿಯಾಗಿ ತಿಳಿದುಕೊಳ್ಳದೆ ಅಪರಿಚಿತರೊಂದಿಗೆ ವ್ಯವಹರಿಸಬಾರದು ಎಂದು ಎಸ್‌ಪಿ ಹನುಮಂತರಾಯ ಮನವಿ ಮಾಡಿದ್ದಾರೆ.
ಫಿನಾಯಿಲ್ ಸೇರಿ ದ್ರಾವಣ ಮಾರಾಟ ಮಾಡುವವರು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ : ಎಸ್‌ಪಿ - ಎಸ್ ಪಿ ಹನುಮಂತರಾಯ ಲೆಟೆಸ್ಟ್ ನ್ಯೂಸ್
ಮನೆಯಲ್ಲಿರುವವರಿಗೆ ಫಿನಾಯಿಲ್ ಎಂದು ಯಾವುದೋ ದ್ರಾವಣದ ವಾಸನೆ ತೋರಿಸಿದ್ದಾರೆ. ಆ ವಾಸನೆ ತೆಗೆದುಕೊಂಡಾಕ್ಷಣ ಮನೆಯವರು ಮೂರ್ಛೆ ಹೋಗಿದ್ದಾರೆ. ಆ ವೇಳೆ ಮನೆಯಲ್ಲಿದ್ದ ಸುಮಾರು 4 ತೊಲೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಮೂರ್ಛೆ ಹೋಗುವ ದ್ರಾವಣ ಸಿಂಪಡಿಸಿ ಈ ಕೃತ್ಯ ಎಸಗಲಾಗಿದೆ..

ವಿಜಯಪುರ ಜಿಲ್ಲೆಯ ಗೋಲಗುಂಬಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 2ರಂದು ಮಧ್ಯಾಹ್ನ ಸುಮಾರು 30 ವರ್ಷದೊಳಗಿನ 6 ಅಪರಿಚಿತ ಮಹಿಳೆಯರು ಫಿನಾಯಿಲ್ ಮಾರುವ ನೆಪದಲ್ಲಿ ಮನೆಗಳಿಗೆ ಹೋಗಿದ್ದಾರೆ. ಮನೆಯಲ್ಲಿರುವವರಿಗೆ ಫಿನಾಯಿಲ್ ಎಂದು ಯಾವುದೋ ದ್ರಾವಣದ ವಾಸನೆ ತೋರಿಸಿದ್ದಾರೆ. ಆ ವಾಸನೆ ತೆಗೆದುಕೊಂಡಾಕ್ಷಣ ಮನೆಯವರು ಮೂರ್ಛೆ ಹೋಗಿದ್ದಾರೆ. ಆ ವೇಳೆ ಮನೆಯಲ್ಲಿದ್ದ ಸುಮಾರು 4 ತೊಲೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಮೂರ್ಛೆ ಹೋಗುವ ದ್ರಾವಣ ಸಿಂಪಡಿಸಿ ಈ ಕೃತ್ಯ ಎಸಗಲಾಗಿದೆ.
ಈ ಹಿನ್ನೆಲೆ ದಾವಣಗೆರೆ ಜಿಲ್ಲೆಯ ಜನರು ಅಪರಿಚಿತ ವ್ಯಕ್ತಿಗಳು ಫಿನಾಯಿಲ್ ಹಾಗೂ ಇನ್ನಿತರೆ ದ್ರಾವಣ ಮಾರಾಟ ಮಾಡಲು ಬಂದಾಗ ವಾಸನೆ ತೆಗೆದುಕೊಳ್ಳದೆ ಎಚ್ಚರಿಕೆಯಿಂದ ಇರಬೇಕು. ಮನೆ ಹತ್ತಿರ ಅಥವಾ ಓಣಿಗಳಲ್ಲಿ ವಾಸನೆ ತೋರಿಸಿ ಯಾವುದೇ ದ್ರಾವಣ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ದೂರವಾಣಿ ಸಂಖ್ಯೆ ಪೊಲೀಸ್ ಕಂಟ್ರೋಲ್ ರೂಮ್ 08192-253100/100, 9480803200ಗೆ ಮಾಹಿತಿ ನೀಡುವ ಜೊತೆಗೆ ಜಾಗರೂಕರಾಗಿರಬೇಕು ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.