ಕರ್ನಾಟಕ

karnataka

ETV Bharat / state

ಕಂಟಕವಾದ ಕುಡಿಯುವ ನೀರು: ಕಲುಷಿತ ನೀರಿನಿಂದ ಅನಾರೋಗ್ಯಕ್ಕೆ ತುತ್ತಾದ ಸಿದ್ದನೂರು ಗ್ರಾಮಸ್ಥರು

ದಾವಣಗೆರೆಯಿಂದ ಕೂಗಳತೆಯಲ್ಲಿರುವ ಸಿದ್ದನೂರು ತಾಂಡಾದ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 40ಕ್ಕೂ ಅಧಿಕ ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

siddanoor villagers became ill after drinking contaminated water
ಕಲುಷಿತ ನೀರಿನಿಂದ ಅನಾರೋಗ್ಯಕ್ಕೆ ತುತ್ತಾದ ಸಿದ್ದನೂರು ಗ್ರಾಮಸ್ಥರು

By

Published : Oct 9, 2021, 4:31 PM IST

ದಾವಣಗೆರೆ:ನಗರದಿಂದ ಕೂಗಳತೆಯಲ್ಲಿರುವ ಸಿದ್ದನೂರು ತಾಂಡಾದಲ್ಲಿ ಕಲುಷಿತ ನೀರು ಕುಡಿದು ಇಡೀ ಗ್ರಾಮವೇ ವ್ಯಾದಿಯಿಂದ ಬಳುತ್ತಿದೆ.

ಕಲುಷಿತ ನೀರಿನಿಂದ ಅನಾರೋಗ್ಯಕ್ಕೆ ತುತ್ತಾದ ಸಿದ್ದನೂರು ಗ್ರಾಮಸ್ಥರು

ದಾವಣಗೆರೆಯಿಂದ ಕೂಗಳತೆಯಲ್ಲಿರುವ ಸಿದ್ದನೂರು ತಾಂಡಾದ ಗ್ರಾಮಸ್ಥರಿಗೆ ಕುಡಿಯುವ ನೀರೇ ಕಂಟಕವಾಗಿದೆ. ಕಲುಷಿತ‌ ನೀರು ಕುಡಿದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನೂರಕ್ಕೂ ಅಧಿಕ ಮಂದಿ ಜ್ವರ,ಕೆಮ್ಮು,ಶೀತ, ಅಲರ್ಜಿಯಿಂದ ಬಳಲುತ್ತಿದ್ದಾರೆ. ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇರದಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.

ಮಳೆ ಬಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನೀರನ್ನು ಸರಬರಾಜು ಮಾಡುವ ಕೊಳವೆ ಬಾವಿಗಳು ಕೊಳಚೆ‌ ನಿರೀನಿಂದ ‌ಜಲಾವೃತಗೊಂಡಿವೆ. ಗ್ರಾಮದಲ್ಲಿರುವ ಶುದ್ಧ ನೀರಿನ‌ ಘಟಕ ಕೆಟ್ಟು ಹೋಗಿ ವರ್ಷಗಳೇ ಉರುಳಿದ್ದು, ಯಾರೊಬ್ಬರು ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಮಳೆ ನೀರು ಮಿಶ್ರಿತ ಬೋರ್​​​​ವೆಲ್ ನೀರು ಕುಡಿಯುವ ಪರಿಸ್ಥಿತಿ ಇದೆ. ಈ ನೀರನ್ನು ಸೇವಿಸಿ ಗ್ರಾಮದಲ್ಲಿ ಕೆಲವರಿಗೆ ಮೈ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿವಂತೆ.

ಇನ್ನು ಈ ಗ್ರಾಮದಲ್ಲಿ 40 ಮನೆಗಳಿದ್ದು, ಪ್ರತಿಮನೆಯಲ್ಲೂ ಒಬ್ಬೊಬ್ಬರಂತೆ 40ಕ್ಕೂ ಹೆಚ್ಚು ಮಂದಿ ನೆಲ ಹಿಡಿದಿದ್ದಾರೆ. ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದ ಜನರೇ ಹೆಚ್ಚಿರುವ ಈ ಗ್ರಾಮದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾರೆ. ಇಷ್ಟೆಲ್ಲ ಆದರೂ ಸಂಬಂಧಪಟ್ಟ ಅಧಿಕಾರಿಗಳಾಲಿ, ರಾಜಕೀಯ ನಾಯಕರಾಗಲಿ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ವಾಯುಭಾರ ಕುಸಿತದ ಎಫೆಕ್ಟ್ : ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ABOUT THE AUTHOR

...view details