ದಾವಣಗೆರೆ:ಸೂಳೆಕೆರೆ ಕಳೆದ 6 ವರ್ಷಗಳಿಂದ ಭರ್ತಿಯಾಗಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೆರೆಗೆ ಜೀವಕಳೆ ಬಂದಿದೆ. ಈ ಹಿನ್ನಲೆ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಮಾಡಾಳು ವಿರುಪಾಕ್ಷಪ್ಪ, ಪ್ರೋ. ಲಿಂಗಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕೆರೆಗೆ ಬಾಗಿನ ಅರ್ಪಿಸಿದರು.
ಏಷ್ಯಾದ ಎರಡನೇ ಅತಿದೊಡ್ಡ ಸೂಳೆಕೆರೆಗೆ ಬಾಗಿನ ಅರ್ಪಣೆ - ಸೂಳೆಕೆರೆಗೆ ಬಾಗಿನ ಅರ್ಪಿಸಿದ ಸಂಸದ ಜಿ ಎಂ ಸಿದ್ದೇಶ್ವರ್
ಕಳೆದ 6 ವರ್ಷಗಳಿಂದ ಬರಡಾಗಿದ್ದ ಸೂಳೆಕೆರೆ ಒಡಲು ತುಂಬಿ ತುಳುಕುತ್ತಿದ್ದು, ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಮಾಡಾಳು ವಿರುಪಾಕ್ಷಪ್ಪ, ಪ್ರೋ. ಲಿಂಗಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ಭರವಸೆ ನೀಡಿದರು.
![ಏಷ್ಯಾದ ಎರಡನೇ ಅತಿದೊಡ್ಡ ಸೂಳೆಕೆರೆಗೆ ಬಾಗಿನ ಅರ್ಪಣೆ](https://etvbharatimages.akamaized.net/etvbharat/prod-images/768-512-5107301-thumbnail-3x2-sulelake.jpg)
ಸಕಾಲಕ್ಕೆ ಮಳೆಯಾಗದ ಕಾರಣ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಮಾತ್ರವಿತ್ತು. ಈ ಬಾರಿ ಉತ್ತಮ ಮಳೆಯಾದ ಕಾರಣ ಕೆರೆ ಭರ್ತಿಯಾಗಿದೆ. ಮೈದುಂಬಿ ಹರಿಯುತ್ತಿರುವ ಕೆರೆ ನೋಡುಗರ ಆಕರ್ಷಣೆ ಕೇಂದ್ರವಾಗಿದೆ. ಸುಮಾರು 6 ಎಕೆರೆ ಪ್ರದೇಶದಲ್ಲಿರುವ ಕೆರೆ ಭರ್ತಿಯಾಗಿರುವುದು ಈ ಭಾಗದ ಜನರಿಗೆ ಖುಷಿ ತಂದಿದೆ. ಈ ಹಿನ್ನೆಲೆ ಕೆರೆಗೆ ಬಾಗಿನ ಅರ್ಪಿಸಿದ ಸಂಸದ ಸಿದ್ದೇಶ್ವರ್ ಗಂಗಾಮಾತೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೂಳೆಕೆರೆ ತುಂಬಿ ಸಮುದ್ರದಂತೆ ಕಾಣುತ್ತಿದೆ. ಸೂಳೆಕೆರೆಯನ್ನು ಹೆಚ್ಚು ಅಭಿವೃದ್ಧಿ ಪಡಿಸಲು ಡಿಪಿಆರ್ ತಯಾರಿಸಿ 56 ಕೋಟಿ ರೂಪಾಯಿ ಹಣ ಮಂಜುರಾತಿಗೆ ಕೇಳಿದ್ದೇವೆ. ಸೂಳೆಕೆರೆಯನ್ನು ಪ್ರವಾಸಿ ತಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.