ದಾವಣಗೆರೆ:ಜಿಲ್ಲೆಯ ವಿವಿಧ ಹತ್ತು ಪ್ರಕರಣಗಳನ್ನು ಭೇದಿಸುವಲ್ಲಿ ಬೆಣ್ಣೆ ನಗರಿಯ ಖಾಕಿ ಪಡೆ ಯಶಸ್ವಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ರಿಷ್ಯಂತ್, ಕುರಿ ಕಳ್ಳತನ, ಗಂಧದ ಮರ ಹಾಗು ಮೊಬೈಲ್ ಕಳ್ಳತನ ಸೇರದ್ದಂತೆ ಬೈಕ್, ಮನೆ ಮತ್ತು ದೇವಸ್ಥಾನದ ಕಳ್ಳತನದ ಪ್ರಕರಣಗಳನ್ನು ಭೇದಿಸಿ ಖದೀಮರ ಹೆಡೆ ಮುರಿಕಟ್ಟಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಒಂಬತ್ತು ಕುರಿಗಳನ್ನು ವಶಕ್ಕೆ ಪಡೆದು ಆರೋಪಿತ ಇಸ್ಮಾಯಿಲ್ ಹಾಗೂ ಅಮೀರ್ ಜಾನ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ರು.
ಮೊಬೈಲ್ ಹಾಗೂ ಗಂಧದ ಮರ ಕಳ್ಳತನ ಭೇದಿಸಿದ ಖಾಕಿ:
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮೊಬೈಲ್ ಹಾಗೂ ಗಂಧದ ಮರದ ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ಮೂಲದ ಸತೀಶ್ ಎಂಬ ಆರೋಪಿಯನ್ನು ಬಂಧಿಸಿ ಬಂಧಿತನಿಂದ 55,000 ಬೆಲೆ ಬಾಳುವ ಮೂರು ಮೊಬೈಲ್ ಹಾಗೂ 25,000 ಸಾವಿರ ಬೆಲೆ ಬಾಳುವ ಗಂಧದ ಮರಗಳನ್ನು ವಶಕ್ಕೆ ಪಡೆದರು. ಇದು ಬಸವರಾಜ್ ಕುರ್ತುಕೋಟೆ ಎಂಬುವರಿಗೆ ಸೇರಿದ್ದಾಗಿವೆ. ಇನ್ನು ಗಂಧದ ಮರಗಳು ಜಿಎಮ್ಐಟಿಯ ಸಂಸ್ಥೆಗೆ ಸೇರಿದ್ದವು ಎಂದು ತಿಳಿದು ಬಂದಿದೆ.