ಕರ್ನಾಟಕ

karnataka

ಹಣ ಬಿಡಿಸಲು ಎಟಿಎಂಗೆ ಬರುವವರ ಕಾರ್ಡ್​​ ಬದಲಾಯಿಸಿ ವಂಚನೆ: ಆರೋಪಿ ಬಂಧನ

By

Published : Mar 4, 2022, 7:24 PM IST

ಎಟಿಎಂಗಳಿಗೆ ಬರುವ ಗ್ರಾಹಕರನ್ನು ಟಾರ್ಗೆಟ್​ ಮಾಡಿ ಅವರ ಕಾರ್ಡ್​ ಬದಲಿಸಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

Davanagere police arrested accused
ದಾವಣಗೆರೆಯಲ್ಲಿ ಎಟಿಎಂ ಕಾರ್ಡ್​ ಬದಲಿಸಿ ವಂಚಿಸುತ್ತಿದ್ದ ಆರೋಪಿ ಬಂಧನ

ದಾವಣಗೆರೆ:ಎಟಿಎಂ​ಗಳಿಗೆ ಹಣ ಬಿಡಿಸಲು ಬರುವ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಕಾರ್ಡ್​ಗಳನ್ನು ಬದಲಾಯಿಸಿ ಮೋಸ ಮಾಡಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಸಿಸಿಟಿವಿ ದೃಶ್ಯ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಿವಾಸಿ ಯೋಗಾನಂದ (47) ಬಂಧಿತ ಆರೋಪಿ. ಈತ ಪಿಎಚ್​​ಡಿ ಪದವೀಧರನಾಗಿದ್ದು, ಎಟಿಎಂಗೆ ಗ್ರಾಹಕರಿಗೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಹಣ ಬಿಡಿಸಲು ಎಟಿಎಂಗೆ ಬರುವ ವೃದ್ಧರನ್ನು ಖದೀಮ ಟಾರ್ಗೆಟ್​ ಮಾಡುತ್ತಿದ್ದನು. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಆರೋಪಿಯಿಂದ ವಶಕ್ಕೆ ಪಡೆದ ನಗದು

ಆರೋಪಿ ಸುಮಾರು 78 ಅಮಾಯಕರನ್ನು ವಂಚಿಸಿದ್ದು, 18 ಪ್ರಕರಣಗಳಿಗೆ ಸಂಬಂಧಿಸಿದಂತೆ 8.58 ಲಕ್ಷ ನಗದನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Video: ಗುಂಡ್ಲುಪೇಟೆಯಲ್ಲಿ ಬಿಳಿಕಲ್ಲು ಕ್ವಾರಿ ಕುಸಿತ: ಇಬ್ಬರ ರಕ್ಷಣೆ, ಸಾವಿನ ಬಗ್ಗೆ ಸಿಗದ ನಿಖರ ಮಾಹಿತಿ

ABOUT THE AUTHOR

...view details