ಕರ್ನಾಟಕ

karnataka

ETV Bharat / state

ಕುಡಿಯುವ ನೀರಿನ ಸಮಸ್ಯೆ ಎದುರಿಸಲು ದಾವಣಗೆರೆ ಮಹಾನಗರ ಪಾಲಿಕೆ ಸಜ್ಜು

ನೀರಿನ ಸಮಸ್ಯೆ ಎದುರಾದರೆ ಪಾಲಿಕೆ ವ್ಯಾಪ್ತಿಯಲ್ಲಿ 900 ಬೋರ್​ವೆಲ್ ಗಳಿದ್ದು, ಅವನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದಲೂ ನೀರಿನ ಸಮಸ್ಯೆ ಬಗೆಹರಿಯದೇ ಹೋದರೆ ಪಾಲಿಕೆ ಟ್ಯಾಂಕರ್ ಮೊರೆಹೋಗಲು ಮಹಾನಗರ ಪಾಲಿಕೆ ಚಿಂತಿಸಿದೆ.

davanagere palike ready to face drinking water problem
ಕುಡಿಯುವ ನೀರಿನ ಸಮಸ್ಯೆ ಎದುರಿಸಲು ದಾವಣಗೆರೆ ಮಹಾನಗರ ಪಾಲಿಕೆ ಸಜ್ಜು

By

Published : Mar 23, 2021, 2:25 PM IST

ದಾವಣಗೆರೆ: ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲು ಮತ್ತು ಸಮಸ್ಯೆ ಎದುರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ.

ದಾವಣಗೆರೆ‌ ನಗರಕ್ಕೆ ಕುಡಿಯುವ ನೀರು ಪೂರೈಸುವ ಎರಡು ಕೆರೆಗಳಿದ್ದಾಗ್ಯೂ ಕೂಡ ಒಂದು ವೇಳೆ ಸಮಸ್ಯೆ ಎದುರಾದರೆ ಪಾಲಿಕೆ ವ್ಯಾಪ್ತಿಯ ಬೋರ್​ವೆಲ್ ಹಾಗು ಟ್ಯಾಂಕರ್ ಮೊರೆ‌ ಹೋಗಲು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸಲು ದಾವಣಗೆರೆ ಮಹಾನಗರ ಪಾಲಿಕೆ ಸಜ್ಜು

ಬೇಸಿಗೆ ಬಂತೆಂದರೆ ಎಲ್ಲೆಡೆ ನೀರಿನ ಅಭಾವದ್ದೇ ಮಾತು. ಅದರಲ್ಲೂ ಕುಡಿಯುವ ನೀರಿಗಾಗಿ ಎಲ್ಲಿಲ್ಲದ ಬೇಡಿಕೆ. ನೀರಿನ ಸಮಸ್ಯೆ ಎದುರಾಗದಂತೆ ಒಂದಿಷ್ಟು ಕ್ರಮ ಕೈಗೊಂಡರೂ, ನೀರು ಶೇಖರಣೆ ಮಾಡಿದ್ದರೂ ಕೆಲವೆಡೆ ಅದು ಕೂಡ ಸಾಲುವುದಿಲ್ಲ ಎನ್ನುವ ಪರಿಸ್ಥಿತಿ. ಇತ್ತೀಚಿನ ದಿನಗಳಲ್ಲಂತೂ ನೀರಿನ ಸಮಸ್ಯೆ ಬಾರದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಬೆಣ್ಣೆನಗರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಬೋರ್ ವೆಲ್ ಹಾಗು ಟ್ಯಾಂಕರ್ ಮೊರೆ‌ ಹೋಗಲು ಪಾಲಿಕೆ ನಿರ್ಧರಿಸಿದೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಳೇ ದಾವಣಗೆರೆಯ ಭಾಗದಲ್ಲಿ ಕುಡಿಯುವ ನೀರಿ ಸಮಸ್ಯೆ ಮೊದಲಿಂದಲೂ ಇದೆ. ದಾವಣಗೆರೆಯು ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕವೂ ನೀರಿನ ಸಮಸ್ಯೆ ಮುಂದುವರೆದಿದೆ. 24*7 ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ನೀಡಬೇಕೆಂದು ಸ್ಮಾರ್ಟ್ ಸಿಟಿ ನಿಯಮ ಇದ್ದರೂ ಕೂಡ ಇದು ಹಳೇ ದಾವಣಗೆರೆಗೆ ಅನ್ವಯಿಸುವುದಿಲ್ವ ಎಂಬ ಪ್ರಶ್ನೆ ಜನರನ್ನು‌ ಕಾಡುತ್ತಿದೆ.

ಇದನ್ನೂ ಓದಿ:ಮಾ. 31 ರೊಳಗೆ ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸಲಾಗುವುದು: ಶಿಕ್ಷಣ ಸಚಿವರ ಆಶ್ವಾಸನೆ

ಹಳೇ ದಾವಣಗೆರೆಯ ವೆಂಕೋಬ ಕಾಲೋನಿ, ಶಿವನಗರ, ಎಸ್.ಎಸ್.ಎಮ್ ನಗರ, ವಿಜಯ ನಗರ, ಯರಗುಂಟಿ, ಆಝಾದ್ ನಗರ, ಭಾಷಾ ನಗರ, ಭರತ್ ಕಾಲೋನಿ, ಮೆಹಬೂಬ್ ನಗರ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಇಲ್ಲಿ ಪ್ರತಿ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಇನ್ನು ಬೇಸಿಗೆ ಬಂದರೆ ತಿಂಗಳಿಗೊಮ್ಮೆ ನೀರು ಬಿಟ್ಟಿರುವ ಉದಾಹರಣೆಗಳು ಸಹ ಕಣ್ಮುಂದೆ ಇವೆ. ಅದ್ರೆ ಈ ಬಗ್ಗೆ ಪಾಲಿಕೆ ಕಮಿಷನರ್​ರವರಿಗೆ ಕೇಳಿದ್ರೆ, ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೇ ಎಲ್ಲ ಎಂಬುದು ಅವರ ವಾದವಾಗಿದೆ.

ಟಿವಿ ಸ್ಟೇಷನ್ ಕೆರೆ ಹಾಗು ಕುಂದವಾಡ ಕೆರೆ ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಕೆರೆಗಳಾಗಿವೆ. ಕೆನಲ್ ಮೂಲಕ ನೀರನ್ನು ಈ ಕೆರೆಗಳಿಗೆ ಲಿಫ್ಟ್ ಮಾಡುವ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ‌. ಅದ್ರು ನೀರಿನ ಸಮಸ್ಯೆ ಎದುರಾದರೆ ಪಾಲಿಕೆ ವ್ಯಾಪ್ತಿಯಲ್ಲಿ 900 ಬೋರ್ ವೆಲ್ ಗಳಿದ್ದು, ಅದನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದಲೂ ನೀರಿನ ಸಮಸ್ಯೆ ಬಗೆಹರಿಯದೇ ಹೋದರೆ ಪಾಲಿಕೆ ಟ್ಯಾಂಕರ್ ಮೊರೆಹೋಗಲು ಚಿಂತಿಸಿದೆ.

ABOUT THE AUTHOR

...view details