ಪಾಲಿಕೆ ಫಲಿತಾಂಶ: ದಾವಣಗೆರೆಯಲ್ಲಿ ಲಘು ಲಾಠಿ ಪ್ರಹಾರ - Davanagere metropolitan election results announced
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ನಗರದ ಡಿಆರ್ಆರ್ ಶಾಲೆ ಮುಂಭಾಗದಲ್ಲಿ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿದ್ದು, ನೂಕು ನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಲಘು ಲಾಠಿ ಪ್ರಹಾರ
ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ನಗರದ ಡಿಆರ್ಆರ್ ಶಾಲೆ ಮುಂಭಾಗದಲ್ಲಿ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿದ್ದು, ನೂಕು ನುಗ್ಗಲು ಉಂಟಾಯಿತು. ಈ ಹಿನ್ನೆಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಸಿಪಿಐ ಲಕ್ಷ್ಮಣ್ ನಾಯಕ್ ನೇತೃತ್ವದಲ್ಲಿ ಲಘು ಲಾಠಿ ಪ್ರಹಾರ ನಡೆಯಿತು. ಬಳಿಕ ಎಸ್ಪಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ದಾವಣಗೆರೆಯಲ್ಲಿ ಲಘು ಲಾಠಿ ಪ್ರಹಾರ