ದಾವಣಗೆರೆ:ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ನ ಮೂವರು ಕಾರ್ಪೋರೇಟರ್ಗಳ ಗೈರು ಹಾಜರಾತಿಗೆ ಸಂಬಂಧಿಸಿದಂತೆ ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ತಿರುಗೇಟು ನೀಡಿದ್ದಾರೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರೇ ಮೂವರಿಗೆ ದುಡ್ಡು ಕೊಟ್ಟು ಬರಬೇಡಿ ಅಂತಾ ಎಲ್ಲಿಗೋ ಕಳಿಸಿರಬೇಕು. ಅವರ ಆರೋಪ ಸತ್ಯಕ್ಕೆ ದೂರವಾದದ್ದು. ಯಡಿಯೂರಪ್ಪರ ಯಾವ ಆಪರೇಷನ್ ಕಮಲವೂ ನಡೆದಿಲ್ಲ, ಏನೂ ಇಲ್ಲ ಎಂದರು. ಕಾಂಗ್ರೆಸ್ ಸದಸ್ಯರಿಗೆ ಬಿಜೆಪಿ ಹಣ ಕೊಟ್ಟು ಚುನಾವಣೆಗೆ ಬಾರದಂತೆ ಮಾಡಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆರೋಪ ಮಾಡಿದ್ದರು.
ಇದನ್ನೂ ಓದಿ: ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ: ಮತದಾನ ಬಹಿಷ್ಕರಿಸಿ ಹೊರ ನಡೆದ ಕಾಂಗ್ರೆಸ್
ಮೇಯರ್, ಉಪ ಮೇಯರ್ ಚುನಾವಣೆ ವೇಳೆ ಕಾಂಗ್ರೆಸ್ನವರು ಒಳ ಬಂದರು. ಮೂರು ಜನ ಅವರ ಸದಸ್ಯರೇ ಹಾಜರಾಗಿಲ್ಲ ಎಂದು ಗೊತ್ತಾದ ತಕ್ಷಣ ವಿಡಿಯೋ ರೆಕಾರ್ಡ್ ಮಾಡಿ ಅಂದ್ರು. ನಾವೆಲ್ಲಾ ಸುಮ್ಮನೆ ಕುಳಿತಿದ್ದೆವು. ಸೋಲು ಖಚಿತ ಆಗ್ತಿದ್ದಂತೆ ಧಿಕ್ಕಾರ ಕೂಗಲು ಪ್ರಾರಂಭಿಸಿದರು. ಇದು ಪಾಲಿಕೆಯ ಚರಿತ್ರೆಯಲ್ಲಿ ಉಳಿಯುವಂತಹ ಘಟನೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ದಾವಣಗೆರೆ ಮೇಯರ್, ಉಪ ಮೇಯರ್ ಚುನಾವಣೆ ಪಾರದರ್ಶಕವಾಗಿ ನಡೆದಿದೆ. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟ ಅಧಿಕಾರ ಹಿಡಿಯಲು ಎಂಎಲ್ಸಿಗಳು, ಶಾಸಕರ ಮತ ಸೇರಿಸಿರಲಿಲ್ವಾ? ಎಲ್ಲರ ವಿಳಾಸ ಹಾಗೂ ಮತದಾನದ ಗುರುತಿನ ಚೀಟಿ ಕ್ರಮಬದ್ಧವಾಗಿಯೇ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.