ದಾವಣಗೆರೆ: ಆಶ್ರಯ ಯೋಜನೆಯಡಿ ಯಾವುದೇ ನಿವೇಶನ ಮತ್ತು ಮನೆಗಳ ವಿತರಣೆಗೆ ಸಂಬಂಧಪಟ್ಟಂತೆ ಅರ್ಜಿಗಳನ್ನು ವಿತರಿಸಿಲ್ಲ ಎಂದು ದಾವಣಗೆರೆ ಪಾಲಿಕೆ ಮೇಯರ್ ಅಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆಶ್ರಯ ಯೋಜನೆಯಡಿ ಯಾವುದೇ ಅರ್ಜಿ ವಿತರಿಸಿಲ್ಲ: ಮೇಯರ್ ಸ್ಪಷ್ಟನೆ - Davanagere Mayor Ajay Kumar
ನಿವೇಶನ ಮತ್ತು ಮನೆಗಳ ವಿತರಣೆಗೆ ಸಂಬಂಧಪಟ್ಟಂತೆ ಹಣ ಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ನಕಲಿ ಅರ್ಜಿಗಳನ್ನು ನೀಡಿ ವಂಚಿಸುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮೇಯರ್ ಅಜಯ್ ಕುಮಾರ್ ತಿಳಿಸಿದ್ದಾರೆ.
Davanagere mayor
ನಗರದಲ್ಲಿ ಕೆಲ ವ್ಯಕ್ತಿಗಳು ಪಾಲಿಕೆಯ ಗಮನಕ್ಕೆ ತಾರದೇ ನಕಲಿ ಅರ್ಜಿಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹಣ ಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಜನರನ್ನು ವಂಚಿಸುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಆಶ್ರಯ ಯೋಜನೆಯಡಿ ಯಾವುದೇ ನಿವೇಶನವನ್ನು ನೀಡುವುದಿದ್ದರೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಯಾರಾದರೂ ಅರ್ಜಿ ನೀಡಿದರೆ ನನ್ನ ಗಮನಕ್ಕೆ ತನ್ನಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.