ಕರ್ನಾಟಕ

karnataka

ETV Bharat / state

ಹಸುಗೂಸು ಗೋಳಾಡೀತಲೇ, ಭೂಲೋಕ ನಡುಗೀತಲೇ.. ಇದು ಕಮ್ಮಾರಗಟ್ಟೆ ಶ್ರೀ ಆಂಜನೇಯಸ್ವಾಮಿ ಕಾರ್ಣಿಕ - ಶ್ರೀ ಆಂಜನೇಯಸ್ವಾಮಿ ಕಾರ್ಣಿಕ

ಈ ಹಿಂದೆ ನಿಜವಾದ ಭೂಲೋಕ ನಡುಗಿತಲೇ ಎಚ್ಚರ ಎಂದು ನುಡೆದಿದ್ದ ಕಾರ್ಣಿಕದ ಮಾತು ಸತ್ಯವಾಗಿತ್ತು. ಇದೀಗ ನುಡಿದಿರುವ ಭವಿಷ್ಯ ಆತಂಕಕ್ಕೆ ಕಾರಣವಾಗಿದೆ. ಇನ್ನು, ಮೈಸೂರಿನ ಮಹಾರಾಜರಿಗೆ ಇಲ್ಲಿನ ಕಾರ್ಣಿಕದ ಮೇಲೆ ನಂಬಿಕೆ ಇತ್ತು ಎನ್ನಲಾಗಿದೆ. ಇದರ ಆಧಾರದಲ್ಲಿ ಭವಿಷ್ಯದ ಯೋಜನೆ ರೂಪುವಾಗುತ್ತಿತ್ತಂತೆ..

davanagere-kammarakatte-anjaneyaswamy-karnika
ಕಾರ್ಣಿಕ ನುಡಿದ ಕಮ್ಮಾರಗಟ್ಟೆ ಶ್ರೀ ಆಂಜನೇಯಸ್ವಾಮಿ

By

Published : Aug 14, 2021, 5:21 PM IST

ದಾವಣಗೆರೆ :ಕೊರೊನಾದಂತ ಸಂಕಷ್ಟಕ್ಕೆ ಸಿಲುಕಿ ಇಡೀ ವಿಶ್ವವೀಗ ತಲ್ಲಣಿಸಿದೆ. ಈ ನಡುವೆ ಕಮ್ಮಾರಗಟ್ಟೆ ಆಂಜನೇಯ ಸ್ವಾಮಿ ಮತ್ತೆ ಆತಂಕದ ಭವಿಷ್ಯ ನುಡಿದಿದೆ. ಹಸುಗೂಸು ಗೋಳಾಡೀತಲೇ, ಭೂಲೋಕ ನಡುಗೀತಲೇ ಎಚ್ಚರ ಎಂದು ಕಾರ್ಣಿಕ ಭವಿಷ್ಯ ನುಡಿದಿದೆ.

ದಾವಣಗೆರೆಯ ಹೊನ್ನಾಳಿ ತಾಲೂಕಿನ‌ ಕಮ್ಮಾರಗಟ್ಟೆ ಗ್ರಾಮದಲ್ಲಿ ನಡೆದ ಕಮ್ಮಾರಗಟ್ಟೆ ಶ್ರೀ ಆಂಜನೇಯಸ್ವಾಮಿ ಕಾರ್ಣಿಕ ಭವಿಷ್ಯ ನುಡಿದಿದೆ. ಕೊರೊನಾ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳು‌ ಮಕ್ಕಳನ್ನು ಬಾಧಿಸಲಿವೆ, ಪ್ರಕೃತಿ‌ ವಿಕೋಪಗಳಿಂದ ಜನಜೀವನ‌ ಅಸ್ತವ್ಯಸ್ತವಾಗಲಿದೆ ಎಂಬ ಒಳಾರ್ಥದಿಂದ ಈ ಭವಿಷ್ಯ ಕೂಡಿದೆ. ಇನ್ನು, ಕೊರೊನಾ ಹೆಚ್ಚಾಗಿ ಕಾಡಲಿದ್ಯಾ ಎಂಬ ಆತಂಕ ಜನರಲ್ಲಿ ಮೂಡಲಾರಂಭಿಸಿದೆ.

ಕಾರ್ಣಿಕ ನುಡಿದ ಕಮ್ಮಾರಗಟ್ಟೆ ಶ್ರೀ ಆಂಜನೇಯಸ್ವಾಮಿ

ಈ ಹಿಂದೆ ನಿಜವಾದ ಭೂಲೋಕ ನಡುಗಿತಲೇ ಎಚ್ಚರ ಎಂದು ನುಡೆದಿದ್ದ ಕಾರ್ಣಿಕದ ಮಾತು ಸತ್ಯವಾಗಿತ್ತು. ಇದೀಗ ನುಡಿದಿರುವ ಭವಿಷ್ಯ ಆತಂಕಕ್ಕೆ ಕಾರಣವಾಗಿದೆ. ಇನ್ನು, ಮೈಸೂರಿನ ಮಹಾರಾಜರಿಗೆ ಇಲ್ಲಿನ ಕಾರ್ಣಿಕದ ಮೇಲೆ ನಂಬಿಕೆ ಇತ್ತು ಎನ್ನಲಾಗಿದೆ. ಇದರ ಆಧಾರದಲ್ಲಿ ಭವಿಷ್ಯದ ಯೋಜನೆ ರೂಪುವಾಗುತ್ತಿತ್ತಂತೆ.

ಓದಿ:ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು : ಶಿಕಾರಿಪುರದಲ್ಲಿ ಪ್ರತಿಭಟನೆ

ABOUT THE AUTHOR

...view details