ದಾವಣಗೆರೆ: ನಾನೊಬ್ಬ ಬಡ ಕುಟುಂಬದಿಂದ ಬಂದವನು. ನನ್ನ ಬಾಲ್ಯದಲ್ಲಿ ಬಂದಂತಹ ಕಷ್ಟಗಳನ್ನು ಮೆಟ್ಟಿ ನಿಂತು ಬಡತನದಲ್ಲಿ ಅರಳಿದ ಹೂವಾಗಿ ಇಂದು ಜಿಲ್ಲಾಧಿಕಾರಿಯಾಗಿದ್ದೇನೆ ಎಂದು ಡಿಸಿ ಮಹಾಂತೇಶ್ ಬೀಳಗಿ ಹೇಳಿದರು.
ಬಡತನದಲ್ಲಿ ಅರಳಿದ ಹೂವಾಗಿ ಇಂದು ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದೇನೆ: ಮಹಾಂತೇಶ್ ಬೀಳಗಿ - ದಾವಣಗೆರೆ ಲಾಡ್ಜಿಂಗ್ ಉದ್ದಿಮೆದಾರರ ಸಂಘ
ಅಪೂರ್ವ ರೆಸ್ಟೋರೆಂಟ್‌ನಲ್ಲಿ ದಾವಣಗೆರೆ ಜಿಲ್ಲಾ ಲಾಡ್ಜಿಂಗ್ ಉದ್ದಿಮೆದಾರರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು.
ಅಪೂರ್ವ ರೆಸ್ಟೋರೆಂಟ್‌ನಲ್ಲಿ ದಾವಣಗೆರೆ ಜಿಲ್ಲಾ ಲಾಡ್ಜಿಂಗ್ ಉದ್ದಿಮೆದಾರರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘದಿಂದ ಅಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಸೋಂಕಿತರನ್ನು ಆಸ್ವತ್ರೆಯಲ್ಲಿಡಲು ಬೆಡ್‍ಗಳ ಕೊರತೆ ಎದುರಾಯಿತು. ಈ ವೇಳೆ ನೆರವಿಗೆ ಬಂದ ಹೋಟೆಲ್ ಮಾಲೀಕರ ಸಂಘ ಹಾಗೂ ಲಾಡ್ಜ್ ಮಾಲೀಕರಿಗೆ ಅಭಿನಂದನೆ ತಿಳಿಸಿದರು.
ನಮ್ಮ ಸಮಾಜ ತುಂಬಾ ಒಳ್ಳೆಯ ಗುಣಮಟ್ಟದಲ್ಲಿದೆ. ಎಲ್ಲಿಯವರೆಗೆ ನಾವು ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡುತ್ತೇವೋ ಅಲ್ಲಿಯವರೆಗೆ ಸಮಾಜವು ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದ ಅವರು, ಹಳ್ಳಿಯ ಒಬ್ಬ ಗ್ರಾಮ ಸೇವಕನಿಂದ ಹಿಡಿದು ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಕೊರೊನಾ ವಾರಿಯರ್ಸ್, ಕಮಾಂಡರ್ ಗಳು ನನಗೆ ಬೆಂಬಲ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.