ಕರ್ನಾಟಕ

karnataka

ETV Bharat / state

ಸೆ.21ಕ್ಕೆ ದಾವಣಗೆರೆ ಹಿಂದೂ ಮಹಾ ಗಣಪತಿಯ ನಿಮಜ್ಜನ ಮೆರೆವಣಿಗೆ - ಹಿಂದೂ ಮಹಾ ಗಣಪತಿ

ನಗರದ ಹೈಸ್ಕೂಲ್ ಮೈದಾನದಲ್ಲಿ ಧರ್ಮಸ್ಥಳ ಮಾದರಿಯಲ್ಲಿ ಗಣೇಶ ಮಂಟಪ ಕಟ್ಟಡವನ್ನು ನಿರ್ಮಾಣ ಮಾಡಿ ಅದರಲ್ಲಿ ಹಿಂದೂ ಮಹಾಗಣಪತಿಯನ್ನು ಕೂರಿಸಲಾಗಿದ್ದು, ಇದರ ನಿಮಜ್ಜನ ಕಾರ್ಯಕ್ರಮವನ್ನು ಇದೇ ಸೆ.21ಕ್ಕೆ ಮಾಡಲಾಗುವುದು ಎಂದು ಹಿಂದೂ ಮಹಾಗಣಪತಿಯ ಸಂಸ್ಥಾಪಕ ಅಧ್ಯಕ್ಷ ಗುರು ಜೊಳ್ಳಿ ತಿಳಿಸಿದರು.

Davanagere Hindu Maha Ganesh

By

Published : Sep 16, 2019, 10:17 PM IST

ದಾವಣಗೆರೆ: ನಗರದ ಹೈಸ್ಕೂಲ್​ ಮೈದಾನದಲ್ಲಿ ಕೂರಿಸಿರುವ ಹಿಂದೂ ಮಹಾ ಗಣಪತಿಯನ್ನು ಇದೇ 21ಕ್ಕೆ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ನಿಮಜ್ಜನ ಮಾಡಲು ಕಮಿಟಿ ನಿರ್ಧರಿಸಿದೆ ಎಂದು ಹಿಂದೂ ಮಹಾಗಣಪತಿಯ ಸಂಸ್ಥಾಪಕ ಅಧ್ಯಕ್ಷ ಗುರು ಜೊಳ್ಳಿ ತಿಳಿಸಿದರು.

ದಾವಣಗೆರೆ ಹಿಂದೂ ಮಹಾ ಗಣಪತಿ

ನಗರದ ಹೈಸ್ಕೂಲ್ ಮೈದಾನದಲ್ಲಿ ಧರ್ಮಸ್ಥಳ ಮಾದರಿಯಲ್ಲಿ ಗಣೇಶ ಮಂಟಪ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಇದನ್ನು ನಿರ್ಮಾಣ ಮಾಡಲು ಕೋಲ್ಕತ್ತಾ ಮೂಲದ 18 ಜನರ ತಂಡ ಸತತ 45 ದಿನಗಳ ಕಾಲ ಕೆಲಸ ಮಾಡಿ ಈ ಬೃಹತ್ ಧರ್ಮಸ್ಥಳ ಮಾದರಿಯನ್ನು ನಿರ್ಮಿಸಿದ್ದಾರೆ. ಇದು 45 ಅಡಿ ಎತ್ತರ, 160 ಅಡಿ ಅಗಲ, 120 ಅಡಿ ಉದ್ದದ ಈ ಬೃಹತ್ ಮಂಟಪ ಧರ್ಮಸ್ಥಳದ ಮೂಲ ಮಾದರಿಯಂತೆಯೇ ಇದೆ.

ಈ ಬೃಹತ್ ಮಂಟಪದಲ್ಲಿ 15 ಅಡಿ ಎತ್ತರದ ಪರಿಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಗಣೇಶ ಮೂರ್ತಿಯ ಜೊತೆಗೆ 10 ಅಡಿ ಎತ್ತರದ ಮಂಜನಾಥ್ ಸ್ವಾಮೀಯ ಮೂರ್ತಿ ನಿರ್ಮಿಸಲಾಗಿತ್ತು. ಆದರೆ ಕಳೆದ ವಾರ ಬೀಸಿದ ಗಾಳಿಮಳೆಗೆ ಮಂಟಪದ ಎಡ ಭಾಗ ಕುಸಿದು ಬಿದ್ದಿತ್ತು. ಆದರೆ ಟ್ರಸ್ಟ್ ನವರು ಶ್ರಮ ವಹಿಸಿ ಐದು ದಿನದಲ್ಲಿ ಮತ್ತೆ ಮಂಟಪ ನಿರ್ಮಾಣ ಮಾಡಿದ್ದಾರೆ.

ಚಿತ್ರದುರ್ಗದ ಜೊತೆ ಕಾಂಪಿಟೇಶನ್ ಇಲ್ಲ:
ಇಂದು ಮಾಧ್ಯಮಗಳೊಂದಿಗೆ ಹಿಂದು ಮಹಾಗಣಪತಿಯ ಸಂಸ್ಥಾಪಕ ಅಧ್ಯಕ್ಷ ಗುರು ಜೊಳ್ಳಿ ಮಾತನಾಡಿ, ನಮ್ಮ ಪಕ್ಕದ ಜಿಲ್ಲೆ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಗಣೇಶ ವಿಸರ್ಜನೆ ನಡೆಯುತ್ತದೆ. ನಮ್ಮ ಜಿಲ್ಲೆಯ ಜನರು ಇದರಲ್ಲಿ ಭಾಗವಹಿಸುತ್ತಾರೆ. ದುರ್ಗದ ಹಿಂದೂ ಮಹಾ ಗಣಪತಿ ವಿಸರ್ಜನೆ ನಮ್ಮದು ಒಂದೇ ದಿನಾಂಕದಲ್ಲಿ ನಡೆಯಲಿದೆ. ಅವರು 13 ನೇ ತಾರೀಖಿನಂದು ವಿಸರ್ಜನೆ ಮಾಡಲು ತಿರ್ಮಾನಿಸಿದ್ದರು. ಆದರೆ ಅಂದು ಹುಣ್ಣಿಮೆ ಇತ್ತು. ನಾವು 28 ನೇ ತಾರೀಖಿನಂದು ವಿಸರ್ಜನೆ ಮಾಡೋಣ ಎಂದರೆ ಅಂದು ಅಮವಾಸೆ ಇದೆ. ಹೀಗಾಗಿ ಒಂದೇ ದಿನ ಎರಡು ಜಿಲ್ಲೆಗಳ ಮಹಾಗಣಪಗಳು ವಿಸರ್ಜನೆಗೊಳ್ಳುತ್ತಿವೆ. ಅವರ ಜೊತೆ ನಮ್ಮದೇನು ಕಾಂಪಿಟೇಶನ್ ಇಲ್ಲ ಎಂದರು.

ಇನ್ನೂ ಈ ಭಾರಿ ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲು ಕಮಿಟಿ ನಿರ್ಣಯಿಸಿದ್ದು, ಮಹಿಳೆಯರು ಕೂಡ ಟಪ್ಪಾಂಗುಜಿ ಸಾಂಗ್ ಗಳಿಗೆ ಹೆಜ್ಜೆ ಹಾಕಲಿದ್ದಾರೆ, ಮೆರವಣಿಗೆಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದರು.

ABOUT THE AUTHOR

...view details