ಕರ್ನಾಟಕ

karnataka

ETV Bharat / state

ದಾವಣಗೆರೆ ಗಾಂಜಾ ಪ್ರಕರಣ: 52 ಗಿಡಗಳೊಂದಿಗೆ ಆರೋಪಿ ವಶಕ್ಕೆ - davanagere ganja case

ಹೂವಿನ ಕುಂಡಗಳಲ್ಲಿ ಅಕ್ರಮವಾಗಿ ಬೆಳೆದಿದ್ದ 52 ಗಾಂಜಾ ಗಿಡಗಳೊಂದಿಗೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

davanagere ganja case: accused is in police custody
ದಾವಣಗೆರೆ: 52 ಗಾಂಜಾ ಗಿಡಗಳೊಂದಿಗೆ ಆರೋಪಿ ವಶಕ್ಕೆ

By

Published : Jul 20, 2022, 2:31 PM IST

ದಾವಣಗೆರೆ: ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮನೆಯ ಟೆರೆಸ್​​ನಲ್ಲಿ ಹೂವಿನ ಕುಂಡಗಳಲ್ಲಿ ಅಕ್ರಮವಾಗಿ ಬೆಳೆದಿದ್ದ 52 ಗಾಂಜಾ ಗಿಡಗಳೊಂದಿಗೆ ಆರೋಪಿ ರಮೇಶ್ ಎಂಬಾತನನ್ನು ವಶಕ್ಕೆ ಪಡೆದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಬಕಾರಿ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ಬಗೆಹರಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ABOUT THE AUTHOR

...view details