ಕರ್ನಾಟಕ

karnataka

ETV Bharat / state

ಆಸೆ ಹುಟ್ಟಿಸಿ ಕೊಚ್ಚಿ ಹೋದ ಫಸಲು: ಗದ್ದೆ ಮುಂದೆ ನಿಂತು ಮಮ್ಮಲ ಮರುಗಿದ ರೈತ - davanagere district news

ನಿನ್ನೆ ಸುರಿದ ಭಾರಿ ಮಳೆಗೆ ಜಿಲ್ಲೆಯ ರೈತ ಮಂಜುನಾಥ ಎಂಬಾತ ಬೆಳೆದಿದ್ದ ಬೆಳೆ ಕೊಚ್ಚಿ ಹೋಗಿದೆ. ಇದಕ್ಕೆ ಪರಿಹಾರ ನೀಡಿ ಜೀವನಕ್ಕೆ ನೆರವಾಗುವಂತೆ ರೈತ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಸದ್ಯ ವಿಡಿಯೋ ವೈರಲ್ ಅಗಿದೆ.

ದಾವಣಗೆರೆ ರೈತನ ಅಳಲು

By

Published : Oct 22, 2019, 8:54 PM IST

ದಾವಣಗೆರೆ :ಧಾರಾಕಾರ ಮಳೆಯಿಂದ ಕೊಚ್ಚಿ ಹೋದ ಫಸಲಿನ ಮುಂದೆ ರೈತನೋರ್ವ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಜಿಲ್ಲೆಯ ಲೋಕಿಕೆರೆ ಗ್ರಾಮದ ರೈತ ಮಂಜುನಾಥ್​ ಎಂಬಾತ ಸಾಲ ಸೋಲ ಮಾಡಿ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಹಾಗೆ ಬೆಳೆದ ಬೆಳೆ ಮಳೆಗೆ ಕೊಚ್ಚಿ ಹೋಗಿದೆ. ಭತ್ತದ ಗದ್ದೆ ಕೆರೆಯಂತಾಗಿದ್ದು, ತನ್ನ ಗದ್ದೆಯ ದೃಶ್ಯವನ್ನು ನೋಡಿದ ರೈತ ಮಮ್ಮಲ ಮರುಗಿದ್ದಾನೆ. ಇನ್ನು ಪರಿಹಾರ ನೀಡುವಂತೆ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾನೆ.

ಆಸೆ ಹುಟ್ಟಿಸಿ ಕೊಚ್ಚಿ ಹೋದ ಫಸಲು: ಜಮೀನಿನ ಮುಂದೆ ನಿಂತು ಮಮ್ಮಲ ಮರುಗಿದ ರೈತ

ತನ್ನ ಜಲಾವೃತವಾದ ಜಮೀನಿನ ಮುಂದೆ ನಿಂತು ವಿಡಿಯೋ ಮಾಡಿರುವ ಮಂಜುನಾಥ್, ಯಾರು ನೆರವಿಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details