ದಾವಣಗೆರೆ:ಜಿಲ್ಲೆಯ ಕೆಟಿಜೆ ನಗರದಲ್ಲಿ ಅರುಣ್ ಕುಮಾರ್ ಹಾಗೂ ಗೌರಮ್ಮ ದಂಪತಿ ನೆಲೆಸಿದ್ದಾರೆ. ಇವರ ಪುತ್ರ ಶಿವಶಂಕರ್ ತನಗೊಂದು ಶ್ವಾನ ಬೇಕೆಂದು ಹಟ ಹಿಡಿದು ಕೊನೆಗೂ ಒಂದು ನಾಯಿ ಮರಿಯನ್ನು ಮನೆಗೆ ತಂದಿದ್ದರು. ಅದರ ಹೆಸರು ಡಯಾನ. ಮುಂದಿನ ಎರಡು ತಿಂಗಳಿಗೆ 13 ವರ್ಷದ ಶಿವಶಂಕರ್ ಮೃತಪಟ್ಟಿದ್ದಾನೆ. ಈತನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಡಯಾನ ತನ್ನ ಮಾಲೀಕನ ಅಗಲಿಕೆಯ ನೋವಿನಿಂದ ಇನ್ನೂ ಹೊರಬಂದಿಲ್ವಂತೆ.
ಬಾಲಕನ ಶವವನ್ನು ಹಾವೇರಿಯ ಬೆಳಗುತ್ತಿ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ಸಮಾಧಿ ಮಾಡಲಾಗಿತ್ತು. ಪೋಷಕರು ಶಿವಶಂಕರ್ ಸಮಾಧಿಗೆ ಭೇಟಿ ನೀಡಿದ್ರೆ, ಶಿವಶಂಕರ್ನನ್ನು ಹಚ್ಚಿಕೊಂಡಿದ್ದ ಶ್ವಾನ ಕೂಡಾ ಸಮಾಧಿ ಮೇಲೆ ಮಲಗಿ ಕಣ್ಣೀರಿಡುತ್ತಂತೆ. ಇದನ್ನು ಗಮನಿಸಿದ ಪೋಷಕರು ಡಯಾನನನ್ನೇ ತಮ್ಮ ಮಗ ಶಿವಶಂಕರ್ ರೂಪದಲ್ಲಿ ನೋಡ್ತಿದ್ದೇವೆ. ಮಗನ ಸ್ಥಾನವನ್ನು ಡಯಾನಾಗೆ ನೀಡಿದ್ದೇವೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರೀತಿಯ ನಾಯಿಯ ಹುಟ್ಟುಹಬ್ಬವನ್ನೂ ಕೂಡ ಆಚರಿಸುತ್ತಿದ್ದಾರೆ.