ದಾವಣಗೆರೆ:ಮಾರುಕಟ್ಟೆ ಸುಂಕ ವಸೂಲಿಯಲ್ಲಿ ಕೇಳಿದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಾಪಾರಿಯೊಬ್ಬರ ತಕ್ಕಡಿ ತೆಗೆದುಕೊಂಡು ಹೋಗಿ ಹೆದರಿಸಿದ್ದಲ್ಲದೆ, ಹಣ ಕೊಟ್ಟ ಬಳಿಕ ತಕ್ಕಡಿ ಹಿಂದುರಿಗಿಸಿರುವ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.
ದಾವಣಗೆರೆ ಮಾರುಕಟ್ಟೆಯಲ್ಲಿ ಸುಂಕ ವಸೂಲಿದಾರರ ದೌರ್ಜನ್ಯಕ್ಕೆ ವ್ಯಾಪಾರಿಗಳು ಹೈರಾಣ - davanagere latest news
ಸುಂಕ ವಸೂಲಿ ದಂಧೆಗೆ ದಾವಣಗೆರೆಯ ಹಳೇ ತರಕಾರಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಬೇಸತ್ತು ಹೋಗಿದ್ದಾರೆ.
ದಾವಣಗೆರೆ ಹಳೇತರಕಾರಿ ಮಾರುಕಟ್ಟೆ
ನಗರದ ಹಳೇ ತರಕಾರಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ತಕ್ಕಡಿ ಕಸಿದುಕೊಂಡು ಹೋಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳ್ಳಿಯಿಂದ ಸೊಪ್ಪು ಮಾರಲು ಬಂದಿದ್ದ ವೃದ್ಧನಿಗೆ ಪೀಡಿಸಿ, 20 ರೂಪಾಯಿ ಬದಲಿಗೆ 100 ರೂಪಾಯಿ ವಸೂಲು ಮಾಡಲು ಹರಾಜುದಾರರು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ಕೇಳಿದಷ್ಟು ಹಣ ನೀಡದಿದ್ದಕ್ಕೆ ತಕ್ಕಡಿ ಕೈಯಲ್ಲಿ ಇಟ್ಟುಕೊಂಡು ಹೋಗುವ ನಾಟಕ ಮಾಡಿ, ಬಳಿಕ ಹಣ ಕೊಟ್ಟರೆ ಮಾತ್ರ, ತಕ್ಕಡಿ, ಅಂಗಡಿ ವಸ್ತುಗಳನ್ನು ನೀಡುತ್ತಾರೆ. ದಿನನಿತ್ಯದ ನಾವು ಇದರಿಂದ ರೋಸಿ ಹೋಗೆದ್ದೇವೆ ಅನ್ನೋದು ವ್ಯಾಪಾರಿಗಳ ಅಳಲಾಗಿದೆ.