ದಾವಣಗೆರೆ: ಲಾಕ್ಡೌನ್ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ನೇತೃತ್ವದ ತಂಡ ಮಾಡಿದೆ.
ಎಷ್ಟೇ ಮನವಿ ಮಾಡಿದ್ರೂ ಕೇಳದ ಜನ: ಲಾಠಿ ರುಚಿ ಜೊತೆಗೆ ಬಂಧನ! - davanagere latest news
ವಿನೋಬನಗರ, ಅರುಣಾ ಥಿಯೇಟರ್, ಭಗತ್ ಸಿಂಗ್ ನಗರ, ಕೆಟಿಜೆ ಬಡಾವಣೆ ಸೇರಿದಂತೆ ಹಲವೆಡೆ ಅನವಶ್ಯಕವಾಗಿ ಜನರು ತಿರುಗಾಡುತ್ತಿದ್ದರು. ಈ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಡಿಸಿ, ಎಸ್ಪಿ, ಎಸಿ ನೇತೃತ್ವದಲ್ಲಿ ಹಲವು ತಂಡಗಳು ಕಾರ್ಯಾಚರಣೆಗೆ ಇಳಿದಿದ್ದವು. ಎಷ್ಟೇ ಮನವಿ ಮಾಡಿದರೂ ಜನರು ಸ್ಪಂದಿಸದ ಕಾರಣ ಇಂದು ದಾಳಿ ನಡೆಸಲಾಗಿದೆ.
ಲಾಠಿ ರುಚಿ ಜೊತೆಗೆ ಬಂಧನದ ಕಾರ್ಯಾಚರಣೆ
ವಿನೋಬನಗರ, ಅರುಣಾ ಥಿಯೇಟರ್, ಭಗತ್ ಸಿಂಗ್ ನಗರ, ಕೆಟಿಜೆ ಬಡಾವಣೆ ಸೇರಿದಂತೆ ಹಲವೆಡೆ ಅನವಶ್ಯಕವಾಗಿ ಜನರು ತಿರುಗಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಡಿಸಿ, ಎಸ್ಪಿ, ಎಸಿ ನೇತೃತ್ವದಲ್ಲಿ ಹಲವು ತಂಡಗಳು ಕಾರ್ಯಾಚರಣೆಗೆ ಇಳಿದಿದ್ದವು. ಎಷ್ಟೇ ಮನವಿ ಮಾಡಿದರೂ ಜನರು ಸ್ಪಂದಿಸದ ಕಾರಣ ಈ ದಾಳಿ ನಡೆಸಲಾಗಿದೆ.
ಅನಗತ್ಯವಾಗಿ ಓಡಾಡುತಿದ್ದ ಜನರನ್ನ ಬೆನ್ನತ್ತಿ ಹೋದ ಪೊಲೀಸರು ಲಾಠಿ ರುಚಿ ತೋರಿಸಿ ವಶಕ್ಕೆ ಪಡೆದರು. ಸುಮಾರು ನೂರಕ್ಕೂ ಹೆಚ್ಚು ಜನರು ಹಾಗೂ 500ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಿದ್ದಾರೆ.